ಡಿಕೆಶಿ-ಸಚಿವ ಆನಂದ್ ಸಿಂಗ್ ರಹಸ್ಯ ಭೇಟಿ!
ಅಂದಾಜು ಅರ್ಧ ಗಂಟೆ ಕಾಲ ಉಭಯರ ಚರ್ಚೆ
ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಪಕ್ಷಾಂತರ ಪರ್ವ
ಮತ್ತೆ ಕಾಂಗ್ರೆಸ್ ನತ್ತ ಆನಂದ್ ಸಿಂಗ್ ಮುಖ.?
ಸಂಪುಟ ವಿಸ್ತರಣೆ ವೇಳೆ ಆನಂದ್ ಸಿಂಗ್ ಅಸಮಾಧಾನ
ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ ಭೇಟಿ
ಬೆಂಗಳೂರು : ಬಿಜೆಪಿ ಶಾಸಕರು, ಸಚಿವರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. minister anand sing meet congress leader DK shivakumar
ಇದೀಗ ಈ ಸುದ್ದಿಗೆ ಪುಷ್ಟಿ ನೀಡುವ ಘಟನೆವೊಂದು ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಬೇಟಿ ನೀಡಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸೋಮವಾರ ಬೆಳಗ್ಗೆ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಆನಂದ್ ಸಿಂಗ್ ಖಾಸಗಿ ಕಾರಿನಲ್ಲಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಅಂದಾಜು ಅರ್ಧ ಗಂಟೆಗೂ ಅಧಿಕ ಕಾಲ ಸಚಿವ ಆನಂದ್ ಸಿಂಗ್ ಡಿಕೆಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ.
ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆನಂದ್ ಸಿಂಗ್ ಮತ್ತೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಆನಂದ್ ಸಿಂಗ್ ಈ ಹಿಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರವಾಸೋಧ್ಯಮ ಇಲಾಖೆ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದರು.
ಇದೀಗ ಜಿಲ್ಲಾ ಉಸ್ತುವಾರಿ ವಿಚಾರದಲ್ಲೂ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಅವರು ಕಾಂಗ್ರೆಸ್ ನತ್ತ ಮುಖ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ನಾಯಕರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಅನ್ನೋ ವಾದಕ್ಕೆ ಪುಷ್ಠಿ ನೀಡಿದೆ.









