Anand Singh | ವಿಜಯನಗರ ಉಸ್ತುವಾರಿ ತಪ್ಪಿದ್ದಕ್ಕೆ ಆನಂದ್ ಸಿಂಗ್ ಬೇಸರ
ಕೊಪ್ಪಳ : ಇಡೀ ರಾಜ್ಯದಲ್ಲಿ ಉಸ್ತುವಾರಿ ಬದಲಾವಣೆಯಾಗಿದೆ. ಬಹಳಷ್ಟು ಜನರಲ್ಲಿ ಉಸ್ತುವಾರಿ ಬದಲಾವಣೆ ಪ್ರಶ್ನೆ ಇದ್ದು, ನಮ್ಮಲ್ಲೂ ಈ ಬಗ್ಗೆ ಪ್ರಶ್ನೆ ಇದೆ ಎಂದು ಸಚಿವ ಆನಂದ್ ಸಿಂಗ್ ಬೇಸರ ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಯಾಕಂದರೇ ಸಾಕಷ್ಟು ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿ, ಬೇರೆ ಜಿಲ್ಲೆಯ ಉಸ್ತುವಾರಿಯನ್ನ ನೀಡಿಲಾಗಿದೆ.
ಈ ಹಿನ್ನೆಲೆಯಲ್ಲಿ ಹಲವು ಸಚಿವರು ಅಸಮಧಾನ ಹೊರಹಾಕಿದ್ದು, ಇದೀಗ ಕೊಪ್ಪಳದಲ್ಲಿ ಆನಂದ್ ಸಿಂಗ್, ಕೊಪ್ಪಳದವರು ಸಂತೋಷದಲ್ಲಿ ಇದ್ದರೆ ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ ಎಂದು ಹೇಳುವ ಮೂಲಕ ಬೇಸರ ಹೊರ ಹಾಕಿದ್ದಾರೆ.
ಇಡೀ ರಾಜ್ಯದಲ್ಲಿ ಉಸ್ತುವಾರಿ ಬದಲಾವಣೆಯಾಗಿದೆ. ಬಹಳಷ್ಟು ಜನರಲ್ಲಿ ಉಸ್ತುವಾರಿ ಬದಲಾವಣೆ ಪ್ರಶ್ನೆ ಇದ್ದು, ನಮ್ಮಲ್ಲೂ ಈ ಬಗ್ಗೆ ಪ್ರಶ್ನೆ ಇದೆ. ತವರು ಜಿಲ್ಲೆ ಉಸ್ತುವಾರಿಗಳನ್ನು ಬೇರೆ ಬೇರೆ ಜಿಲ್ಲೆಗೆ ಹಾಕಿದ್ದು, ಇದು ನನ್ನ ರಾಜಕೀಯ ಜೀವನದ ಅನುಭವದಲ್ಲೇ ಮೊದಲು ಎಂದಿದ್ದಾರೆ. ಇದೇ ವೇಳೆ ವಿಜಯನಗರ ಜಿಲ್ಲೆಗಾಗಿ ತಮ್ಮ ಹೋರಾಟವನ್ನು ಮೆಲುಕು ಹಾಕಿದರು.