minister Dr. K. Sudhakar | ಮೊಟ್ಟೆ ಹೊಡೆದವ ಕಾಂಗ್ರೆಸ್ ಕಾರ್ಯಕರ್ತ
ಚಿಕ್ಕಬಳ್ಳಾಪುರ : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಚಿವ ಡಾ.ಕೆ.ಸುಧಾಕರ್, ಇಂತಹ ಪ್ರಸಂಗ ಆಗಬಾರದು. ಯಾರೇ ಹೀಗೆ ಮಾಡಿದರು ತಪ್ಪು. ಘಟನೆ ಆದ ಕೂಡಲೇ ಸರ್ಕಾರ ಕ್ರಮ ತಗೊಂಡಿದೆ. ಅಲ್ಲಿಗೆ ಎಲ್ಲರೂ ಸುಮ್ಮನೆ ಇರಬಹುದಿತ್ತು.
ಆದ್ರೆ ಕಾಂಗ್ರೆಸ್ ರಾಜಕೀಯ ಮಾಡಿತು. ರಾಜಕಾರಣ ಮಾಡಿ ಮುಂದೆ ತಗೊಂಡು ಹೋಗೋದು ಸರಿಯಲ್ಲ ಎಂದು ಹೇಳಿದರು.
ಈಗ ಮೊಟ್ಟೆ ಹೊಡೆದವ ಕಾಂಗ್ರೆಸ್ ಕಾರ್ಯಕರ್ತ. ಬಹು ಅಸಂಖ್ಯಾತರ ಭಾವನೆಗೆ ಧಕ್ಕೆ ಮಾಡಿದ್ದಕ್ಕೆ ಮೊಟ್ಟೆ ಹೊಡೆದ ಅಂತ ಆತ ಹೇಳಿದ್ದಾನೆ. ಈಗ ಈ ಬಗ್ಗೆ ಕಾಂಗ್ರೆಸ್ ಅವ್ರು ಏನ್ ಹೇಳ್ತಾರೆ. ನಿರೀಕ್ಷೆ ಮಾಡ್ತಿದ್ದೇನೆ.

ಇದಕ್ಕೆ ಕಾಂಗ್ರೆಸ್ ಏನ್ ಹೇಳುತ್ತೆ ನೋಡೊಣ. ಸತ್ಯಕ್ಕೆ ಎರಡು ಮುಖ ಇದೆ ಅಂತ ಗೊತ್ತಾಗಿದೆ. ಕಾಂಗ್ರೆಸ್ ಕಾರ್ಯಕರ್ತನೇ ಇದನ್ನ ಮಾಡೋರು.
ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕರ ಮೇಲೆ ಅಟ್ಟಹಾಸ ನಡೆಸುತ್ತಿದ್ದಾರೆ. ಹೀಗಾಗಿ ಮುಂದೆ ಯಾವ ರೀತಿ ಕಾಂಗ್ರೆಸ್ ನಾಯಕರು ನಡೆದುಕೊಳ್ಳಬೇಕು ಅಂತ ತಿಳಿದುಕೊಳ್ಳಬೇಕು ಎಂದರು.
ಇದೇ ವೇಳೆ ಜನೋತ್ಸವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ ಆಗಿತ್ತು. ಈಗ ಇದಕ್ಕೆ ಮತ್ತೆ ದಿನಾಂಕ ನಿಗದಿ ಮಾಡಿದ್ದೇವೆ.
ಸೆಪ್ಟೆಂಬರ್ 8 ಕ್ಕೆ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿದೆ. ಕಳೆದ ಬಾರಿ ನಿಗದಿ ಮಾಡಿದ ಸ್ಥಳದಲ್ಲಿ ನಡೆಯಲಿದೆ. ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಕಾರ್ಯಕ್ರಮ ಬರ್ತಾರೆ ಎಂದು ಮಾಹಿತಿ ನೀಡಿದರು.








