ರಾಷ್ಟ್ರೀಯ ಏಕತೆ ದಿನಾಚರಣೆ – ಫಿಟ್ ಇಂಡಿಯಾ ವಾಕಥಾನ್ ಉದ್ಘಾಟಿಸಿದ ಕ್ರೀಡಾ ಸಚಿವ. Fit India Walkathon
ಗುಜರಾತ್, ನವೆಂಬರ್ 01: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತೆ ದಿನಾಚರಣೆಯಂದು ಕ್ರೀಡಾ ಸಚಿವ ಕಿರೆನ್ ರಿಜಿಜು ಶನಿವಾರ 200 ಕಿ.ಮೀ ದೂರದ ‘ಫಿಟ್ ಇಂಡಿಯಾ ವಾಕಥಾನ್’ ಅನ್ನು ಉದ್ಘಾಟನೆ ಮಾಡಿದರು. Fit India Walkathon
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಈ ಕಾರ್ಯಕ್ರಮವನ್ನು ಆಯೋಜಿಸಿದೆ ಮತ್ತು ಮೂರು ದಿನಗಳ ಕಾಲ ಇದು ನಡೆಯಲಿದೆ.
ಇದರಲ್ಲಿ 100 ಕ್ಕೂ ಹೆಚ್ಚು ಐಟಿಬಿಪಿ ಜವಾನರು ಮತ್ತು ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
ಪಕ್ಷಿವೀಕ್ಷಕರಿಗಾಗಿ ಕೆವಾಡಿಯಾ ಸಜ್ಜು – ಪ್ರಧಾನಿ ಮೋದಿ
ವಾಕಥಾನ್ ಮೆರವಣಿಗೆ ಹಗಲು ರಾತ್ರಿ ಮುಂದುವರಿಯುತ್ತದೆ ಮತ್ತು ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶದಲ್ಲಿರುವ ಥಾರ್ ಮರುಭೂಮಿಯ ದಿಬ್ಬಗಳ ಮೂಲಕವೂ ಹಾದುಹೋಗುತ್ತದೆ.
ಈ ಮೆರವಣಿಗೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್), ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಎಫ್), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ( ಎನ್ಎಸ್ಎಫ್) ಭಾಗವಹಿಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ