Minister Madhuswami | ಆಡಿಯೋ ಧ್ವನಿ ನನ್ನದೆ, ರಾಜೀನಾಮೆ ಕೇಳಿದ್ರೆ ಕೊಡುತ್ತೇನೆ
ತುಮಕೂರು : ಆಡಿಯೋ ತುಂಬಾ ಹಳೆಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೆ ನೆನಪಿಲ್ಲ. ಆಡಿಯೋದಲ್ಲಿ ಇರುವ ಧ್ವನಿ ನನ್ನದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಮಾಧುಸ್ವಾಮಿ ಅವರದ್ದು ಎಂಬ ಆಡಿಯೋವೊಂದು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಧುಸ್ವಾಮಿ, ಆಡಿಯೋ ತುಂಬಾ ಹಳೆಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೆ ನೆನಪಿಲ್ಲ.
ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ದ ದೂರು ನೀಡುತ್ತೇನೆ.
ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಕೂಡ ಅಪರಾಧ. ಹಾಗಾಗಿ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು.
ಇನ್ನು ಅಪರಿಚಿತ ವ್ಯಕ್ತಿಯ ದಾಖಲೆ ಮಾಧ್ಯಮದವರು ನೀಡಲಿ. ಯಾರೂ ನನ್ನ ವಿರುದ್ದ ಷಡ್ಯಂತ್ರ ಮಾಡಿಲ್ಲ.
ಯಾರನ್ನೂ ನಾನು ದೂಷಣೆ ಮಾಡೋದಿಲ್ಲ. ಈಗಾಗಲೇ ಸಿಎಂ ಗೆ ಸ್ಪಷ್ಟನೆ ನೀಡಿದ್ದೇನೆ.
ರಾಜೀನಾಮೆ ಕೊಡುವ ಪ್ರಮೇಯ ಇಲ್ಲ. ಸಿಎಂ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಸಚಿವ ಸೋಮಶೇಕರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ.
ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.