ಮಾನವೀಯತೆ ಮೆರೆದ ಸಚಿವ ಸುಧಾಕರ್
ದೇವನಹಳ್ಳಿ : ಅಪಘಾತದಲ್ಲಿ ಸಿಲುಕಿದ ಗಾಯಾಳುವಿನ ನೆರವಿಗೆ ಧಾವಿಸುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಸಚಿವ ಸುಧಾಕರ್, ತೆರಳುತ್ತಿದ್ದಾಗ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿತ್ತು.
ಬೈಕ್ನಲ್ಲಿದ್ದ ಮಹಿಳೆ ಮತ್ತು ಸವಾರ ಟಿಪ್ಪರ್ ನಡುವೆ ಸಿಲುಕಿ ಪರದಾಡುತ್ತಿದ್ದರು.
ಅಪಘಾತ ಕಂಡ ಕೂಡಲೆ ಕಾರು ನಿಲ್ಲಿಸಿ ಗಾಯಾಳುಗಳ ನೆರವಿಗೆ ಸಚಿವ ಡಾ.ಕೆ ಸುಧಾಕರ್ ಧಾವಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಬಂದ ಸಚಿವ ಸುಧಾಕರ್ ಕೂಡಲೆ ಆ್ಯಂಬುಲೆನ್ಸ್ಗೆ ಕರೆ ಮಾಡಿ ಗಾಯಾಳನ್ನು ಆಸ್ವತ್ರೆಗೆ ರವಾನಿಸಿದ್ದಾರೆ.
ಅಲ್ಲದೇ ವೈದ್ಯರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ಕೂಡ ಕೊಟ್ಟಿದ್ದಾರೆ.
ಇನ್ನು ಸಚಿವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Minister Sudhakar Helps by admitting accident victims to hospital in devanahalli saaksha tv