ಕುಂದಾಪುರದ ವಿದ್ಯಾರ್ಥಿನಿಯನ್ನು ಅಭಿನಂದಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್

1 min read
kundapura student

ಕುಂದಾಪುರದ ವಿದ್ಯಾರ್ಥಿನಿಯನ್ನು ಅಭಿನಂದಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್

ಕುಂದಾಪುರ, ಮಾರ್ಚ್20: ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಆಯ್ಕೆಯಾಗಿರುವುದಕ್ಕಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಕುಂದಾಪುರ ತಾಲ್ಲೂಕಿನ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನುಷಾರನ್ನು ಅಭಿನಂದಿಸಿದರು.
kundapura student

ನಿಮ್ಮನ್ನು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಲು ಆಯ್ಕೆ ಮಾಡಿರುವುದು ನಮಗೆ ಸಂತೋಷವಾಗಿದೆ. ನಿಮ್ಮ ಶಾಲೆ ಮತ್ತು ರಾಜ್ಯವನ್ನು ನೀವು ಹೆಮ್ಮೆಪಡುವಂತೆ ಮಾಡಬೇಕು ಎಂದು ಸಚಿವರು ಅನುಷಾಗೆ ಕರೆ ನೀಡಿದರು.

ಕುಂದಾಪುರದ ಆರ್ಡಿ- ಅಲ್ಬಾಡಿ ಶಾಲೆಯು ರಾಷ್ಟ್ರವ್ಯಾಪಿ ಆಯ್ಕೆಯಾದ 30 ಶಾಲೆಗಳಲ್ಲಿ ಒಂದಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿಯೊಂದಿಗೆ ಮಾತನಾಡಲು ಅವಕಾಶ ಸಿಗುತ್ತದೆ. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಆಯ್ಕೆಯಾದ ಎರಡು ಶಾಲೆಗಳಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಕೂಡ ಒಂದು.

ಕುಮಾರಿ ಅನುಷಾ ಬಡ ಕುಟುಂಬಕ್ಕೆ ಸೇರಿದ್ದವರಾಗಿದ್ದು, ಅವರ ತಂದೆ ಗಾರೆ ಕೆಲಸ ಮಾಡುತ್ತಾರೆ.
kundapura student

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತ ಒಟ್ಟು 10.39 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 1,500 ಅರ್ಜಿಗಳನ್ನು ಕೊನೆಯ ಸುತ್ತಿಗೆ ಆಯ್ಕೆ ಮಾಡಲಾಯಿತು. ‌ಅದರಲ್ಲಿ 30 ಮಂದಿ ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳೊಂದಿಗೆ ನೇರವಾಗಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ದೇಶಾದ್ಯಂತದ 30 ಶಾಲೆಗಳ ಪೈಕಿ ಕರ್ನಾಟಕದಿಂದ ಕುಂದಾಪುರದ ಆರ್ಡಿ ಶಾಲೆ ಮತ್ತು ಬೆಂಗಳೂರಿನ ಒಂದು ಶಾಲೆ ಆಯ್ಕೆಯಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd