ಅಲ್ಪ ಸಂಖ್ಯಾತರು ಕಾಂಗ್ರೆಸ್ ಬ್ಯಾಕ್ ಬೋನ್ : ಕೆ.ಎನ್.ರಾಜಣ್ಣ
ಬೆಂಗಳೂರು : ಅಲ್ಪ ಸಂಖ್ಯಾತರು ಕಾಂಗ್ರೆಸ್ ಬ್ಯಾಕ್ ಬೋನ್. ಹಾಗಾಗಿ ನಾಳೆ ನಾಡಿದ್ದು ಅವರೂ ಕೂಡ ಕೇಳಬಹುದು ಅದಕ್ಕೇ ಹೇಳೋದು ಇಂತದ್ದೆಲ್ಲ ಬೇಕಿದ್ಯಾ ಎಂದು ಕಾಂಗ್ರೆಸ್ ನಲ್ಲಿ ಶುರುವಾಗಿರುವ ಬಣಗಳ ವಿಚಾರವಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಪ್ರತ್ಯೇಕ ಬಣದ ವಿಷಯದ ಕುರಿತು ಮಾತನಾಡಿದ ಅವರು, ಈಗ ಥರ್ಡ್ ಫ್ಟಂಟ್ ಆಂತ ಓಡಾಡುತ್ತಿದೆ. ಅಲ್ಪ ಸಂಖ್ಯಾತರು ಕಾಂಗ್ರೆಸ್ ಬ್ಯಾಕ್ ಬೋನ್. ಹಾಗಾಗಿ ನಾಳೆ ನಾಡಿದ್ದು ಅವರೂ ಕೂಡ ಕೇಳಬಹುದು ಅದಕ್ಕೇ ಹೇಳೋದು ಇಂತದ್ದೆಲ್ಲ ಬೇಕಿದ್ಯಾ ಎಂದು ಪ್ರಶ್ನಿಸಿದರು.
ಇನ್ನು ಶಾಸಕರು ಅವರ ವೈಯುಕ್ತಿಕ ಹೇಳಿಕೆ ನೀಡಿರಬಹುದು. ಇಂತಹ ಹೇಳಿಕೆ ನೀಡದಂತೆ ಹೈಕಮಾಂಡ್ ಎಚ್ಚರಿಸಿದೆ. ಹಾಗಾಗಿ ಇದು ಸದ್ಯಕ್ಕೆ ಅಪ್ರಸ್ತುತ ಎಂದು ಕಾಂಗ್ರೆಸ್ ಸಿಎಂ ಅಭ್ಯರ್ಥಿ ವಿಚಾರವಾಗಿ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದರು.
ಇನ್ನೂ ಚುನಾವಣೆಗೆ ಎರಡು ವರ್ಷ ಇದೆ. ಈಗಲೇ ಸಿಎಂ ಬಗ್ಗೆ ಮಾತನಾಡುವುದು ಸರಿಯಲ್ಲ, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಂತರ ಶಾಸಕರ ಸಲಹೆ ಪಡೆದು ಹೈಕಮಾಂಡ್ ನಿರ್ಧರಿಸುತ್ತೆ. ಮೊದಲು ಬಹುಮತ ಬರುವಂತೆ ಮಾಡಲಿ. ಆದಾದ ಮೇಲೆ ಸಿಎಂ ಬಗ್ಗೆ ಚರ್ಚೆ ಮಾಡಲಿ. ವಾಲ್ಮೀಕಿ ಸಮುದಾಯದಿಂದ ನನಗೆ ಸಿಎಂ ಆಸೆ ಇಲ್ಲ, ನಾನು ಸಣ್ಣ ಸಚಿವನಾದರೆ ಅಷ್ಟೇ ಸಾಕು. ಈಗ ಸಿಎಂ ಚರ್ಚೆ ಬೇಕಿರಲಿಲ್ಲ ಎಂದು ಹೇಳಿದರು.