ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಹೊಸದಾಗಿ ಪ್ರಾರಂಭಿಸಿದ ಉಚಿತ ಧ್ಯಾನ ಅಪ್ಲಿಕೇಶನ್ ‘ಮಿರಾಕಲ್ ಆಫ್ ಮೈಂಡ್’ ಅಚ್ಚರಿಯ ಸಾಧನೆ ಮಾಡಿದೆ. ಶಿವರಾತ್ರಿಯಂದು ಬಿಡುಗಡೆಯಾದ ಈ ಮೊಬೈಲ್ ಆ್ಯಪ್ ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ (10 ಲಕ್ಷ) ಡೌನ್‌ಲೋಡ್ ಗಳನ್ನು ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ChatGPT’ಯನ್ನೇ ಹಿಂದಿಕ್ಕಿದ ಧ್ಯಾನ ಆ್ಯಪ್!
ಯುವಕರು, ತಾಂತ್ರಿಕ ತಜ್ಞರು, ಮತ್ತು ಆಧ್ಯಾತ್ಮಿಕ ಆಸಕ್ತರು ‘ಮಿರಾಕಲ್ ಆಫ್ ಮೈಂಡ್’ ಅಪ್ಲಿಕೇಶನ್‌ಗೆ ಭಾರೀ ಬೆಂಬಲ ನೀಡಿದ್ದಾರೆ. ಇಷ್ಟೇ ಅಲ್ಲ, ಈ ಆ್ಯಪ್ ತನ್ನ ಆರಂಭಿಕ ಅವಧಿಯಲ್ಲೇ ChatGPT’ಯನ್ನೇ ಹಿಂದಿಕ್ಕುವ ಮಟ್ಟಕ್ಕೆ ಸದ್ದು ಮಾಡಿದೆ. ಇದರಿಂದ ಸದ್ಗುರು ಅವರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ತಾಂತ್ರಿಕ ನಾವೀನ್ಯತೆಯ ಪ್ರಭಾವ ವಿಶ್ವದಾದ್ಯಂತ ಹೇಗೆ ಬೆಳೆದಿದೆ ಎಂಬುದನ್ನು ತೋರಿಸುತ್ತದೆ.
20 ದೇಶಗಳಲ್ಲಿ ಟ್ರೆಂಡಿಂಗ್!
ಈಗಾಗಲೇ ಭಾರತ, ಅಮೆರಿಕ, ಕೆನಡಾ, ಜರ್ಮನಿ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ಈ ಆ್ಯಪ್ ಟ್ರೆಂಡಿಂಗ್ ಆಗಿದೆ. ಇತರ ಧ್ಯಾನ ಆ್ಯಪ್ಗಳಿಗೆ ಪೈಪೋಟಿ ನೀಡುತ್ತಿರುವ ‘ಮಿರಾಕಲ್ ಆಫ್ ಮೈಂಡ್’ ತ್ವರಿತಗತಿಯ ಬೆಳವಣಿಗೆಯಿಂದ ತಂತ್ರಜ್ಞಾನ ಮತ್ತು ಆಧ್ಯಾತ್ಮದ ಸಂಯೋಜನೆಗೆ ಹೊಸ ದಾರಿ ತೆರೆದಿದೆ.
ಅಪ್ಲಿಕೇಶನ್‌ನ ವಿಶೇಷತೆಗಳು
‘ಮಿರಾಕಲ್ ಆಫ್ ಮೈಂಡ್’ ಆ್ಯಪ್ ನೇರವಾಗಿ ಸದ್ಗುರು ಅವರ ಮಾರ್ಗದರ್ಶನದೊಂದಿಗೆ ನಿಮ್ಮ ಮನಸ್ಸನ್ನು ಪ್ರಬೋಧಿಸುವ, ಆತ್ಮಶಾಂತಿ ನೀಡುವ, ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಧ್ಯಾನ ತರಬೇತಿ ನೀಡುತ್ತದೆ.








