ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಪೆದ್ದ ವೆಂಕಣ್ಣಗೆ ಅನುಗ್ರಹಿಸಿದ ರಾಯರು

Miracles of Sri Raghavendra Swamy

Shwetha by Shwetha
July 5, 2025
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಪೆದ್ದ ವೆಂಕಣ್ಣಗೆ ಅನುಗ್ರಹಿಸಿದ ರಾಯರು :-

ಶ್ರೀ ರಾಘವೇಂದ್ರ ಗುರುಗಳು ಸನ್ಯಾಸ ಸ್ವೀಕಾರ ಮಾಡಿದ ನಂತರ, ಸಂಚಾರ ಕೈಗೊಂಡು ಅವರು ತಂಗಿದ ಕಡೆಯೆಲ್ಲಾ ರಾಯರು ತಮ್ಮ ಭಕ್ತರ ಕಷ್ಟ- ನಷ್ಟ, ರೋಗ ರುಜನಿನ್ನು ಪರಿಹರಿಸಿದರು, ಕಿತ್ತು ತಿನ್ನುವ ಬಡತನದ ಕುಟುಂಬಗಳಿಗೆ ಪರಿಹಾರ, ಸಂತಾನ ಭಾಗ್ಯ, ಮುಗ್ಧ ಭಕ್ತಗೆ ಜ್ಞಾನ ನೀಡಿದರು.

Related posts

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

July 28, 2026
sudarshana-chakra-history-and-sudarshana-ashtakam-lyrics-kannada

astro-ಮಹಾವಿಷ್ಣುವಿಗೆ ಶ್ರೀ ಸುದರ್ಶನ ಚಕ್ರ ಆಯುಧ ಪಡೆದದ್ದು ಹೇಗೆ ಗೋತ್ತಾ..

July 27, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಅಜ್ಞಾನಿಗಳ ದುರಹಂಕಾರಕ್ಕೆ ಜ್ಞಾನದ ಅರಿವು ಮೂಡಿಸಿದರು. ಸತ್ತು ಹೋದ ಶವಕ್ಕೆ ಜೀವ ಕೊಟ್ಟರು. ಇನ್ನು ಹಲವಾರು ಚಮತ್ಕಾರಗಳೇ ನಡೆದಿದ್ದು ಅದರಲ್ಲಿ ಒಂದೆರಡು.

ಒಮ್ಮೆ ರಾಘವೇಂದ್ರ ಗುರುಗಳ ಸಂಚಾರ ಹೊರಟು ಅವರು ಕುಳಿತ ಮೇನೆಯನ್ನು
ಶಿಷ್ಯರು ಹೊತ್ತು ಹುಬ್ಬಳ್ಳಿಗೆ ಬರುತ್ತಿದ್ದರು. ರಾಯರ ವಿಶ್ರಾಂತಿಗಾಗಿ ಅಲ್ಲೊಂದು ಕಡೆ ಮೇನೆ ಇಳಿಸಿದರು. ರಾಘವೇಂದ್ರರು ಹತ್ತಿರದಲ್ಲಿದ್ದ ದಿಬ್ಬದ ಮೇಲೆ ಕುಳಿತರು. ದೂರದಲ್ಲಿ ನೋಡುತ್ತಿದ್ದ ನಾಲ್ಕಾರು ಹುಡುಗರು ಓಡಿಬಂದು, ಇಲ್ಲಿ ಏಕೆ ಕುಳಿತಿರಿ “ಸವನೂರು ನವಾಬರ” ಮಗ ಹಾವು ಕಚ್ಚಿ ಸತ್ತು ಹೋದ ಇದು ಅವನ ಸಮಾಧಿ. ಸಮಾಧಿ ಮೇಲೆ ಕುಳಿತು ನಿಮಗೆ ಮೈಲಿಗೆಯಾಯಿತು ಎಂದರು. ಇದನ್ನು ಕೇಳಿದ ಗುರುಗಳು, ಇಲ್ಲ ಆ ಹುಡುಗನ ಆಯಸ್ಸು ಇನ್ನೂ ಮುಗಿದಿಲ್ಲ. ಆದ್ದರಿಂದ ಅವನನ್ನು ಹೊರಗೆ ತೆಗೆದರೆ ಅವನು ಬಹಳ ಕಾಲ ಬದುಕುತ್ತಾನೆ ಎಂದರು. ಈ ವಿಷಯ ನವಾಬನ ಕಿವಿಗೆ ಮುಟ್ಟುತ್ತಿದ್ದಂತೆ ಆತ ಓಡಿ ಬಂದು ಗುರುಗಳಿಗೆ ನಮಸ್ಕರಿಸಿ ಗುರುಗಳ ಆದೇಶ ದಂತೆ ದಿಬ್ಬದಿಂದ ಶವವನ್ನು ಹೊರಗೆ ತೆಗೆಸಿದನು. ಗುರುಗಳು ಸ್ವಲ್ಪ ಹೊತ್ತು ಮೌನವಾಗಿದ್ದು ಧ್ಯಾನಸ್ಥರಾದರು, ಅವರು ಧ್ಯಾನದಲ್ಲಿ ಇದ್ದಂತೆ ಹುಡುಗನ ಶರೀರ ಚಲಿಸಿದಂತಾಗಿ ಆತ ಕಣ್ಣು ಬಿಟ್ಟು ಎಚ್ಚರಗೊಂಡನು. ಸಂತಸ ಗೊಂಡ ನವಾಬನು ರಾಯರಿಗೆ ಮತ್ತು ಅಲ್ಲಿ ಬಂದ ಸಕಲರಿಗೂ ಸತ್ಕಾರ ಮಾಡಿ ಗೌರವಿಸಿದನು. ಗುರುಗಳಿಗೆ 12 ಗ್ರಾಮಗಳನ್ನು ಉಂಬಳಿ ಕೊಟ್ಟನು. ಅದೀಗ ‘ಕೃಷ್ಣಾಪುರ’ ಗ್ರಾಮವಾಗಿದೆ.

ಪೆದ್ದ ವೆಂಕಣ್ಣನಿಗೆ ಅನುಗ್ರಹಿಸಿದ ರಾಯರು:-

ಒಮ್ಮೆ ರಾಘವೇಂದ್ರರು ಚಾತುರ್ಮಾಸವನ್ನು ಬೇರೆ ಗ್ರಾಮದಲ್ಲಿ ಮಾಡಲು ಸಂಕಲ್ಪಿಸಿದರು. ಅದೇ ರೀತಿ ಚಾತುರ್ಮಾಸ ಗೊತ್ತು ಪಡಿಸಿದ ಗ್ರಾಮದಲ್ಲಿ ಪೂರ್ತಿ ಆಚರಣೆ ಮುಗಿದ ನಂತರ ಹೊರಡುವಾಗ, ಬಂದ ಭಕ್ತರಿಗೆಲ್ಲ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸುತ್ತಿದ್ದರು. ಹೀಗೆ ಬಂದ ಭಕ್ತರ ನಡುವೆ ಒಬ್ಬ ದನ ಕಾಯುವ ಹುಡುಗ ಬಂದನು. ಇವನ ಹೆಸರು ವೆಂಕಣ್ಣ , ತುಂಬಾ ಪೆದ್ದ- ಮುಗ್ಧ, ಗುರುಗಳೇ ನಾನು ನಿಮ್ಮ ಜೊತೆ ಬರುತ್ತೇನೆ ಎಂದನು. ಅವನ ಪರಿಚಯ ಗುರುಗಳಿಗೆ ಇತ್ತು. ಚಾತುರ್ಮಾಸ ಆಚರಣೆ ಇದ್ದಷ್ಟು ದಿನವೂ, ಆ ಜಾಗವನ್ನೆಲ್ಲ ಶುಚಿಗೊಳಿಸುವುದು, ಹೂಗಳನ್ನು ತರುವುದು, ಮಾವಿನ ತೋರಣ ಕಟ್ಟುವುದು, ಅಲ್ಲಿದ್ದವರು ಏನಾದರೂ ಸಣ್ಣಪುಟ್ಟ ಕೆಲಸ ಹೇಳಿದರೆ ಸಂತೋಷದಿಂದ ಮಾಡಿಕೊಡುತ್ತಿದ್ದ ಹೀಗೆ ನಿತ್ಯವೂ ಸೇವೆ ಮಾಡಿಕೊಡುತ್ತಿದ್ದನು. ಗುರುಗಳು, ಮುಂದೆ ನಿನಗೆ ಒಳ್ಳೆಯ ದಿನಗಳು ಬರುತ್ತದೆ ಎಂದರು.

ಆದರೆ ವೆಂಕಣ್ಣ ಹೇಳಿದ, ಗುರುಗಳೇ ನನಗೆ ತಂದೆ- ತಾಯಿ, ಬಂಧು- ಬಳಗ ಯಾರು ಇಲ್ಲ ನನ್ನ ಜೊತೆಯವರು ನಿತ್ಯವೂ ನನ್ನನ್ನು ಅನಾಥ, ದಿಕ್ಕಿಲ್ಲದವನು, ಪೆದ್ದ -ಮೂರ್ಖ ಎಂದು ಬಯ್ಯುತ್ತಾರೆ, ಕೀಟಲೆ ಮಾಡಿ ರೇಗಿಸುತ್ತಾರೆ, ಎಂದು ಹೇಳಿ ಕಣ್ಣಲ್ಲಿ ನೀರು ಹಾಕಿದನು. ಗುರುಗಳು ಅವನ ಶಿರದ ಮೇಲೆ ಕೈ ಇಟ್ಟು, ಮಗು ಚಿಂತಿಸಬೇಡ ‘ಶ್ರೀರಾಮನ’ ಅನುಗ್ರಹ ನಿನಗಿದೆ. ಈ ಅಕ್ಷತೆಯನ್ನು ನಿನ್ನ ಜೊತೆಯಲ್ಲಿ ಇಟ್ಟುಕೊಂಡಿರು, ನಿನ್ನ ಕಷ್ಟ ಕಾಲದಲ್ಲಿ ಇದನ್ನು ಹಿಡಿದುಕೊಂಡು ಸ್ಮರಿಸು, ಎಂದು ಆಶೀರ್ವದಿಸಿ ಹೊರಟರು.

ಕೆಲವು ತಿಂಗಳು ಕಳೆದವು. ಒಂದು ದಿನ ವೆಂಕಣ್ಣ ದನಗಳನ್ನು ಕಾಯುತ್ತಿದ್ದ ಅದೇ
ಮಾರ್ಗದಲ್ಲಿ ನವಾಬನ ನೆಂಟ ಆದವಾನೀಯ ‘ಸಿದ್ಧಿ ಮಸೂರ್ ಖಾನ್’ ಎಂಬು ವನು ತನ್ನ ಅಂಗರಕ್ಷಕರ ಕಾವಲಿನಲ್ಲಿ ಅಂಬಾರಿಯಲ್ಲಿ ಕುಳಿತು ಬರುತ್ತಿದ್ದನು. ಹೀಗೆ ಬರುವಾಗ ಯಾರೋ ಒಬ್ಬ ಸೈನಿಕ ಬಂದು ಒಂದು ಲಕೋಟೆಯನ್ನು ಮಸೂರ್ ಖಾನ್ ಕೈಗೆ ಕೊಟ್ಟನು. ತೆರೆದು ನೋಡಿದರೆ ಅದು ಕನ್ನಡದಲ್ಲಿ ಬರೆದಿತ್ತು. ಅಲ್ಲಿ ಯಾರಿಗೂ ಕನ್ನಡ ಓದಲು ಬರುತ್ತಿರಲಿಲ್ಲ. ಈಗೇನು ಎಂದು ನೋಡುತ್ತಿದ್ದಾಗ ದನಗಳನ್ನು ಕಾಯುತ್ತಿದ್ದ ವೆಂಕಣ್ಣ ಕಣ್ಣಿಗೆ ಬಿದ್ದನು. ಅವನನ್ನೇ ಕರೆದು ಲಕೋಟೆಯನ್ನು ಕೊಟ್ಟು ಓದಲು ಹೇಳಿದನು. ಆದರೆ ವೆಂಕಣ್ಣ ಶಾಲೆಗೆ ಹೋಗಿಲ್ಲ ಅಕ್ಷರ ಜ್ಞಾನ ಇಲ್ಲ. ನನಗೆ ಓದಲು ಬರೆಯಲು ಬರುವುದಿಲ್ಲ ಸ್ವಾಮಿ ಎಂದನು. ಆದರೆ ಆ ನವಾಬ ಕೋಪದಿಂದ ನೀನು ಬ್ರಾಹ್ಮಣರ ಹುಡುಗನಾಗಿದ್ದು ಓದಲು ಬರೆಯಲು ಬರುವುದಿಲ್ಲವೇ? ಸುಳ್ಳು ಹೇಳಿದರೆ ಛಡಿ ಏಟು ಬೀಳುತ್ತದೆ ಎಂದನು. ಹೆದರಿದ ವೆಂಕಣ್ಣಗೆ “ಕಷ್ಟ ಕಾಲದಲ್ಲಿ ಸ್ಮರಿಸು” ಎಂದು ರಾಘವೇಂದ್ರರು ಹೇಳಿದ ಮಾತು ನೆನಪಾಯಿತು ರಾಘವೇಂದ್ರರನ್ನು ಸ್ಮರಿಸುತ್ತಾ, ಪತ್ರವನ್ನು ಬಿಚ್ಚಿ ನೋಡಿದ ಗುರುಗಳ ಅನುಗ್ರಹದಿಂದ ಎಲ್ಲಾ ಅಕ್ಷರಗಳು ಅವನಿಗೆ ತಿಳಿದು, ಒಂದಕ್ಷರ ತಪ್ಪಿಲ್ಲದಂತೆ ಸ್ಪಷ್ಟವಾಗಿ ಓದಿದನು.

ಆ ಪತ್ರದಲ್ಲಿ ಇದ್ದ ವಿಷಯ “ಸಿದ್ದಿ ಮಸೂರ್ ಖಾನ್ಗೆ” ಗಂಡು ಮಗು ಜನಿಸಿದೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ. ಎಂಬ ಶುಭ ಸಮಾಚಾರ ಇತ್ತು. ಇದನ್ನು ಕೇಳಿದ ನವಾಬನಿಗೆ ಸಂತೋಷವಾಯಿತು. ತಕ್ಷಣ ನವಾಬನು ಬಾಲಕ ವೆಂಕಣ್ಣನ ಬೆನ್ನು ತಟ್ಟಿ ಶಹಬಾಸ್ ಎಂದನು. ನೀನು ಏನು ಮಾಡಿಕೊಂಡಿದಿ ಎಂದು ಕೇಳಿದನು ವೆಂಕಣ್ಣ ದನ ಕಾಯುತ್ತಿದ್ದೇನೆ ಎಂದನು. ಈ ಕೆಲಸ ಬಿಟ್ಟು ನನ್ನ ಸೈನ್ಯದಲ್ಲಿ ಸೇರುವೆ ಯಂತೆ ಎಂದು ನವಾಬ ತನ್ನ ಜೊತೆಗೆ ಕರೆದುಕೊಂಡು ಹೋಗಿ ಸೈನ್ಯದಲ್ಲಿ ಸೇರಿಸಿ ದನು. ಒಮ್ಮೆ ವೆಂಕಣ್ಣನಿಗೆ ಯೋಚನೆ ಬಂದಿತು. ಅಕ್ಷರ ಜ್ಞಾನವಿಲ್ಲದ ನನಗೆ ಪತ್ರ ಓದಲು ಬಂದಿದ್ದು ರಾಯರ ಪವಾಡವೇ ಸರಿ. ಪತ್ರ ಓದಿದ್ದು ನೆನೆದರೆ ನಂಬಲು ಸಾಧ್ಯವಿಲ್ಲ. ನಾನು ಈಗಿಂದಲೇ ಓದು ಬರಹ ಕಲಿತು ವಿದ್ಯಾವಂತನಾಗಬೇಕು ಎಂದು ಯೋಚಿಸಿ, ಒಬ್ಬ ಗುರುವಿನ ಮೂಲಕ ವಿದ್ಯಾಭ್ಯಾಸವನ್ನು ಮಾಡಿದನು. ಅವನು ಎಷ್ಟು ಬುದ್ಧಿವಂತನಾದ ಎಂದರೆ, “ಸಿದ್ಧಿ ಮಸೂರ್ ಖಾನ್” ಸೈನಿಕನಾಗಿದ್ದ
ವೆಂಕಣ್ಣನನ್ನು ತನ್ನ ಆಸ್ಥಾನದ “ದಿವಾನ” ನನ್ನಾಗಿ ಮಾಡಿಕೊಂಡನು. ಈ ರೀತಿ ದನ ಕಾಯುತ್ತಿದ್ದ ಬಡವೆಂಕಣ್ಣ ರಾಯರ ಕೃಪೆಯಿಂದ ಆದವಾನಿಯ ‘ನವಾಬನ’ ಆಸ್ಥಾನದಲ್ಲಿ ‘ದಿವಾನ’ನಾದನು.

ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ!

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ತುಂಗಾ ತೀರದಿ ನಿಂತ
ಸುಯತಿವರನ್ಯಾರೆ ಪೇಳಮ್ಮಾ !!

ಸಂಗೀತ ಪ್ರಿಯ ಮಂಗಳ ಸುಗುಣ ತರಂಗ
ಮುನಿ ಕುಲೋತ್ತುಂಗ ಕಾಣಮ್ಮ!!

ಚೆಲುವ ಸುಮುಖ ಫಣಿಯಲ್ಲಿ
ತಿಲಕ ನಾಮಗಳು ನೋಡಮ್ಮ
ಜಲಜಮನೆಯ ಕೊರಳಲ್ಲಿ
ತುಳಸಿ ಮಾಲೆಗಳು ಪೇಳಮ್ಮ
ಸುಲಲಿತ ಕಮಂಡಲು
ದಂಡವನೇ ಧರಿಸಿಹನೇ ನೋಡಮ್ಮ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ
ಪ್ರಹಲ್ಲಾದನು ತಾನಿಲ್ಲಿಹನಮ್ಮ!!

ShareTweetSendShare
Join us on:

Related Posts

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 28, 2026
0

ದಿನ ಭವಿಷ್ಯ: 28-07-2026 ಮೇಷ ರಾಶಿ ಸಾಮಾನ್ಯ ಭವಿಷ್ಯ: ಇಂದಿನ ದಿನ ನಿಮಗೆ ಅತ್ಯಂತ ಉತ್ಸಾಹದಿಂದ ಕೂಡಿರುತ್ತದೆ. ನಿಮ್ಮ ರಾಶ್ಯಾಧಿಪತಿ ಮಂಗಳನಾಗಿರುವುದರಿಂದ, ಇಂದಿನ ದಿನ ನಿಮ್ಮಲ್ಲಿ ಹೊಸ...

sudarshana-chakra-history-and-sudarshana-ashtakam-lyrics-kannada

astro-ಮಹಾವಿಷ್ಣುವಿಗೆ ಶ್ರೀ ಸುದರ್ಶನ ಚಕ್ರ ಆಯುಧ ಪಡೆದದ್ದು ಹೇಗೆ ಗೋತ್ತಾ..

by admin
July 27, 2026
0

!! ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ...

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

by admin
July 27, 2026
0

ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (27-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 27, 2026
0

ದಿನ ಭವಿಷ್ಯ: 27-07-2026 ಮೇಷ ರಾಶಿ ಉದ್ಯೋಗ ಮತ್ತು ವ್ಯಾಪಾರ: ಕಾರ್ಯಕ್ಷೇತ್ರದಲ್ಲಿ ಇಂದು ಹೊಸ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಕಾರ್ಯತತ್ಪರತೆಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಿಗಳಿಗೆ...

guru raghavendra swami

Astro- ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!!

by admin
July 26, 2026
0

ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!! ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ - ಅದ್ಭುತ ಸ್ಥಳ ಪುರಾಣ ಓಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram