ತುಮಕೂರು: ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಹಿನ್ನೆಲೆಯಲ್ಲಿ ಡಿವೈಎಸ್ಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಜಮೀನು ವ್ಯಾಜ್ಯದ ಕುರಿತು ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಈಗಾಗಲೇ ಮಧುಗಿರಿ ಡಿವೈಎಸ್ಪಿ (Madhugiri DySP) ರಾಮಚಂದ್ರಪ್ಪ ಅಮಾನತು ಆಗಿದ್ದಾರೆ. ಸದ್ಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಜಮೀನು ವ್ಯಾಜ್ಯಕ್ಕೆ (Land Dispute) ಸಂಬಂದಿಸಿದಂತೆ ದೂರು ಕೊಡಲು ಬಂದ ಮಹಿಳೆಗೆ ಡಿವೈಎಸ್ಪಿ ಕಚೇರಿಯಲ್ಲೇ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಹೀಗಾಗಿ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶ ಅಲೋಕ್ ಮೋಹನ್ (Alok Mohan) ಆದೇಶ ಹೊರಡಿಸಿದ್ದರು.
ಈ ಬೆನ್ನಲ್ಲೇ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಎಫ್‌ಐಆರ್ ದಾಖಲಿಸಿಕೊಂಡಿದ್ದ ಮಧುಗಿರಿ ಪೊಲೀಸರು, ಡಿವೈಎಸ್‌ಪಿಯನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.








