ಮಿಜೋರಾಂ : ಮನೆಯೊಳಗೂ ಇಡೀ ದಿನ ಮಾಸ್ಕ್ ಧರಿಸಲು ಸೂಚನೆ..!

1 min read

ಮಿಜೋರಾಂ : ಮನೆಯೊಳಗೂ ಇಡೀ ದಿನ ಮಾಸ್ಕ್ ಧರಿಸಲು ಸೂಚನೆ..!

ಮಿಜೋರಾಂ : ಮಿಜೋರಾಂನಲ್ಲಿ ಕೊರೊನಾ ಹಾವಳಿ ಹೆಚ್ಚಾಗ್ತಾಯಿರೋ ಬೆನ್ನಲ್ಲೇ ಮನೆಯೊಳಗೂ ಕೂಡ ಜನ ಇಡೀ ದಿನ ಮಾಸ್ಕ್ ಧರಿಸಬೇಕೆಂದು ಸರ್ಕಾರ ಸೂಚಿಸಿದೆ. ಹೌದು  ಕೋವಿಡ್ ಪ್ರಕರಣಗಳ ಏರಿಕೆ ತಡೆಯುವಲ್ಲಿ ವಿಫಲವಾಗಿರುವ ಸರ್ಕಾರ ಇಂತಹದೊಂದು ಕ್ರಮಕ್ಕೆ ಮುಂದಾಗಿದ್ದು, 24/ 7 ಮಾಸ್ಕ್ ಧಾರಣೆಗೆ ಸೂಚಿಸಿದೆ. ಇದೆಲ್ಲಾದ್ರೂ ಹೋಗ್ಲಿ ಮನೆಯೊಳಗೆ ಕುಟುಂದವರು ಒಟ್ಟಾಗಿ ಕೂತು ಊಟ ಮಾಡಬಾರದು ಎಂದೂ ಕೂಡ ಸಲಹೆ ನೀಡಿದೆ. ಮಾಸ್ಕ್ ಧರಿಸಿ ಇದರಿಂದ ನೀವು ಆಮ್ಲಜನಕದ ಮಾಸ್ಕ್ ಧರಿಸಬೇಕಾಗಿ ಬರುವುದಿಲ್ಲ ಎಂಬ ಘೋಷಣೆಯೊಂದಿಗೆ 10 ದಿನಗಳ ಆಲ್ ಮಾಸ್ಕ್ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ.

ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಕೋವಿಡ್ ಪಾಸಿಟಿವಿಟಿ ದರ ಶೇ 15ರಿಂದ 30ರ ನಡುವೆ ಇರುವ ಕಾರಣ ಸರ್ಕಾರ ಈ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದೆ.  ಊಟ ಮಾಡುವ ಸಮಯ ಹೊರತುಪಡಿಸಿ ಮತ್ತೆಲ್ಲಾ ಸಂದರ್ಭದಲ್ಲಿಯೂ ಮನೆ ಒಳಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ. ಅಲ್ಲದೇ ಆಗಾಗ ಕೈಗಳನ್ನು ಸ್ವಚ್ಛಗೊಳಿಸುವಂತೆಯೂ ಸ್ಯಾನಿಟೈಸರ್‌ಗಳನ್ನು ಬಳಸುವಂತೆಯೂ ಸಲಹೆ ನೀಡಿದೆ. ಕಳೆದ ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಕಾರಣ ತಜ್ಞರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

100% ಪ್ರಯಾಣಿಕರನ್ನು ಕರೆದೊಯ್ಯಲು ವಿಮಾನ ಸಂಸ್ಥೆಗಳಿಗೆ ಅನುಮತಿ..!

ಕಬೋರ್ಡ್ ಮಧ್ಯೆ ಸುರಂಗ ಕೊರೆದು ವೇಶ್ಯಾವಾಟಿಕೆ..!

ಕಾಂಗ್ರೆಸ್ ಪಕ್ಷದಿಂದ ಸಲೀಂ ಉಚ್ಛಾಟನೆ, ವಿ.ಎಸ್.ಉಗ್ರಪ್ಪ ಅಮಾನತು

ಡಿಕೆಶಿ ಅವರ ಪದಚ್ಯುತಿಗೆ ಸಿದ್ದರಾಮಯ್ಯ ತಂತ್ರ : ಬಿಜೆಪಿ

ಗಡಿಯಲ್ಲಿ ಚೀನಾದೊಂದಿಗಿನ ಸಂಘರ್ಷ : ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಆರಂಭ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd