ಚೆಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರ ಕಾರು ಚಿತ್ರದುರ್ಗದ ಹಿರಿಯೂರಿನ ಬಬ್ಬೂರು ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ..
ಅದೃಷ್ಟವಶಾತ್ ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ರಾತ್ರಿ ಚಳ್ಳಕೆರೆ ಕಡೆಯಿಂದ ಮಸ್ಕಲ್ ಗೊಲ್ಲರಹಟ್ಟಿಯ ಸಂಬಂಧಿಕರ ಮನೆಗೆ ತೆರಳುತ್ತಿದ್ದ ಈ ಅವಘಡ ಸಂಭವಿಸಿದೆ.
ಮಸ್ಕಲ್ ಗ್ರಾಮದಿಂದ ಮದುವೆಗೆ ಹೊರಟಿದ್ದ ಮಹೀಂದ್ರಾ ಜೈಲೋ ಕಾರು ಹಾಗೂ ಶಾಸಕರ ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ.
ಏರ್ ಬ್ಯಾಗ್ ತೆರೆದುಕೊಂಡಿದದ್ದ ಪರಿಣಾಮ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಎರಡೂ ಕಾರಿನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..