ನಾನು ಸರ್ಕಾರ ತಂದವ್ನು, ಮಂತ್ರಿ ಸ್ಥಾನ ಕೇಳ್ತೀನಿ : ರಮೇಶ್ ಜಾರಕಿಹೊಳಿ Ramesh Zarakiholi
ಮೈಸೂರು : ನಾನು ಸರ್ಕಾರವನ್ನ ತಂದವನು, ಹಾಗಾಗಿ ಮಂತ್ರಿ ಸ್ಥಾನ ಕೇಳುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ ಎಂದರು.
ಸಚಿವ ಸ್ಥಾನದ ಬಗ್ಗೆ ಮಾತನಾಡಿ, ಸದ್ಯಕ್ಕೆ ಇಲ್ಲಿ ಬಂದಿರುವುದು ಸ್ವಾಮೀಜಿಯನ್ನ ಭೇಟಿ ಮಾಡುವುದಕ್ಕೆ ಎಂದರು.
ಸಿಎಂ ಬಂದು ಭೇಟಿ ಮಾಡಿ ಎಂದಿರುವುದು ನನಗೆ ಗೊತ್ತಿಲ್ಲ. ಮುಂಬೈಗೆ ಹೋಗಿರುವುದು ರಾಜಕೀಯ ಇರಬಹುದು.
ಸುತ್ತೂರು ಶ್ರೀಗಳ ತಾಯಿಯವರು ದೈವಾಧೀನರಾದ ಕಾರಣ ಇಲ್ಲಿಗೆ ಬಂದಿದ್ದೇನೆ. ಮಂತ್ರಿ ಸ್ಥಾನಗೋಸ್ಕರ ನಾನು ಸ್ವಾಮೀಜಿಯನ್ನ ಭೇಟಿ ಮಾಡುತ್ತಿಲ್ಲ ಎಂದು ಹೇಳಿದರು.