ಲಕ್ಷ್ಮೀಪುರಂ ಪೊಲೀಸ್ ಠಾಣೆ ಎದುರು ಸಾ.ರಾ.ಮಹೇಶ್ ಪ್ರತಿಭಟನೆ
ಮೈಸೂರು: ನಿನ್ನೆ ರಾತ್ರಿ (ಶನಿವಾರ) ಲಕ್ಷ್ಮೀಪುರಂಪೊಲೀಸ್ ಠಾಣೆ ಎದುರು ಮಳೆಯನ್ನೂ ಲೆಕ್ಕಿಸದೆ ಶಾಸಕ ಸಾ.ರಾ.ಮಹೇಶ್ ಪ್ರತಿಭಟನೆ ಮಾಡಿದ್ದಾರೆ.
ಶಾಸಕ ಸಾ.ರಾ.ಮಹೇಶ್ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆ ಎಫ್ಐಆರ್ ದಾಖಲಾಗಿತ್ತು. ಇದರಿಂದ ಗರಂ ಆದ ಅವರು ನಿನ್ನೆ ರಾತ್ರಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ನನ್ನನ್ನೂ ಬಂಧಿಸಿ ಅಂತ ಪಟ್ಟುಹಿಡಿದ್ದರು. ಇವರಿಗೆ ವಿಧಾನ ಪರಿಷತ್ತು ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಕಾರ್ಯಕರ್ತರ ಸಾಥ್ ನೀಡಿದ್ದರು.
ಆರ್‌ಟಿಐ ಕಾರ್ಯಕರ್ತ ಗಂಗರಾಜು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ, 8ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದನ್ವಯ ಎಫ್‌ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಆದೇಶ ನೀಡಿತ್ತು. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆ ಎಫ್ಐಆರ್ ದಾಖಲಾಗಿದೆ.
ಜೆಡಿಎಸ್ ಕಾರ್ಯಕರ್ತ ರಘು, ಶಾಸಕ ಸಾ.ರಾ.ಮಹೇಶ್ ವಿರುದ್ಧ ಪ್ರಕರಣ ದಾಖಲಲಾಗಿದೆ. ಜೆಡಿಎಸ್ ಕಾರ್ಯಕರ್ತ ರಘು ವಿರುದ್ಧ ಬೆದರಿಕೆ ಆರೋಪ ಕೇಳಿ ಬಂದಿತ್ತು. ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದಾಗ ಭೂ ಅಕ್ರಮಗಳ ಬಗ್ಗೆ ಗಂಗರಾಜು ದೂರು ಸಾ.ರಾ.ಮಹೇಶ್ ವಿರುದ್ಧ ನೀಡಿದ್ದರು. ಈ ದೂರಿನಲ್ಲಿ ದಟ್ಟಗಳ್ಳಿಯ ಸಾ.ರಾ.ಚೌಲ್ಟ್ರಿಯನ್ನು ಸರ್ಕಾರಿ ಭೂಮಿ ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿತ್ತು.








