ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣವೆಂದ ಮೋದಿ..!
ಮಧ್ಯಪ್ರದೇಶ : ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ.. ಅವರ ಸಮುದಾಯವನ್ನ ಕಾಂಗ್ರೆಸ್ ಪಕ್ಷ ನಿರ್ಲಕ್ಷ ಮಾಡಿತ್ತು. ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಯೋಧ ಬಿರ್ಸಾಮುಡಾ ಜನ್ಮ ದಿನೋತ್ಸವದಲ್ಲಿ ಮೋದಿ ಅವರು ಭಾಗವಹಿಸಿದ್ದರು.. ಈ ವೇಳೆ ಗೌರವ ನಮನ ಸಲ್ಲಿಸಿದ ಮೋದಿ ಅವರು ಆದಿವಾಸಿಗಳಿಗಾಗಿ 50 ಏಕಲವ್ಯ ಶಾಲೆಗಳ ಸ್ಥಾಪನೆಗೆ ಶಂಕುಸ್ಥಾಪನೆ ನೆರೆವೇರಿಸಿದರು.
ಉತ್ತರಪ್ರದೇಶ : 10 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಪಾಪಿ
ಬಳಿಕ ಮಾತನಾಡಿ ಕಾಂಗ್ರೆಸ್ ಆಡಳಿತದಲ್ಲಿ ಸೌಲಭ್ಯ ಪಡೆಯಲು ಆದಿವಾಸಿಗಳು ದಶಕಗಳ ಕಾಲ ಕಾಯಬೇಕಿತ್ತು. ಅಲ್ಲದೇ ಕಾಂಗ್ರೆಸ್ ಸರ್ಕಾರ ಬುಡಕಟ್ಟು ಜನರ 9ರಿಂದ 10 ಉತ್ಪನ್ನಗಳಿಗೆ ಮಾತ್ರ ಬೆಂಬಲ ಬೆಲೆ ನೀಡಿತ್ತು. ಆದರೆ ಬಿಜೆಪಿ ಸರ್ಕಾರ 90 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿದೆ ಎಂದರು.
https://twitter.com/i/broadcasts/1BRJjnDXZXvJw