2022ರ ಅಂತ್ಯದ ವೇಳೆಗೆ 5 ಬಿಲಿಯನ್ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧ – ಮೋದಿ

1 min read
PARIKSHA PE CHARCHA

2022ರ ಅಂತ್ಯದ ವೇಳೆಗೆ 5 ಬಿಲಿಯನ್ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧ – ಮೋದಿ

ರೋಮ್: ಪ್ರಧಾನಿ ಮೋದಿ ಅವರು G – 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್ ನಲ್ಲಿ ಪ್ರವಾಸ ಕೈಗೊಂಡಿದ್ದಾರೆ.. ಈ ನಡುವೆ  ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ ಅವರು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ವಿಶ್ವಕ್ಕೆ ಸಹಕಾರಿಯಾಗಲು ಭಾರತ 2022ರ ಅಂತ್ಯಕ್ಕೆ 5 ಬಿಲಿಯನ್‍ ಕೋವಿಡ್ ಲಸಿಕೆ ಡೋಸ್ ವಿತರಿಸಲು ಸಿದ್ಧ ಎಂದು  ತಿಳಿಸಿದ್ದಾರೆ.

ಅಲ್ಲದೇ ಕೋವಿಡ್ ಮಾರಣಾಂತಿಕ ಕಾಯಿಲೆ ಎದುರಿಸುವಲ್ಲಿ “ಒಂದು ಭೂಮಿ, ಒಂದು ಆರೋಗ್ಯ ವಿಧಾನ” ಸಹಕಾರಿ ಎಂದು ಹೇಳಿದರು. ಇದ್ರಿಂದ ನಮ್ಮ ನಾಗರಿಕರಿಗೆ ಮಾತ್ರವಲ್ಲ, ಪ್ರಪಂಚದ ಉಳಿದ ಭಾಗಗಳಿಗೆ ಲಸಿಕೆ ಲಭ್ಯವಾಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಲಸಿಕೆ ವಿತರಣೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಇದು ಭಾರತ ನೀಡುವ ಕೊಡುಗೆಯಾಗಿದೆ ಎಂದರು.

ಭಾರತಕ್ಕೆ ಪೋಪ್ ಫ್ರಾನ್ಸಿಸ್ ಅವರನ್ನು ಆಹ್ವಾನಿಸಿದ ಮೋದಿ..!

ಇನ್ನೂ 150ಕ್ಕೂ ಹೆಚ್ಚು ದೇಶಗಳಿಗೆ ಭಾರತದ ವೈದ್ಯಕೀಯ ಪೂರೈಕೆ ಮತ್ತು ಸಾಂಕ್ರಾಮಿಕ ವಿರುದ್ಧದ ಹೋರಾಟದ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಕಾರ್ಯದ ಬಗ್ಗೆ ಹೇಳಿದ್ದಾರೆ.

ಭಾರತದ ಆರ್ಥಿಕ ಸುಧಾರಣೆಗಳ ಕುರಿತು ಮಾತನಾಡಿದ ಮೋದಿ ಅವರು, ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಬಾಂಧವ್ಯದ ವೈವಿಧ್ಯೀಕರಣದಲ್ಲಿ ಭಾರತದೊಂದಿಗೆ ಪಾಲುದಾರರಾಗಲು ಜಿ20 ರಾಷ್ಟ್ರಗಳನ್ನು ಆಹ್ವಾನಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd