ಬಿಜೆಪಿ ನೇತೃತ್ವದ ‘ಭಾರತ’ದೊಂದಿಗೆ ಮಾತುಕತೆ ಸಾಧ್ಯವಿಲ್ಲ : ಇಮ್ರಾನ್
ಇಸ್ಲಮಾಬಾದ್ : ದಿನೇ ದಿನೇ ಭಾರತ ಪಾಕಿಸ್ತಾನದ ನಡುವಿನ ಪರಿಸ್ಥಿತಿ ವಿಷಮವಾಗ್ತಲೇ ಇದೆ.. ಇದಕ್ಕೆ ಕಾರಣ ಖುದ್ದು ಇಮ್ರಾನ್ ಖಾನ್ ಅವರ ಹೇಳಿಕೆಗಳೇ.. ಇದೀಗ ಧಾರ್ಮಿಕ ರಾಷ್ಟ್ರೀಯವಾದ ಹೊಂದಿರುವ ಭಾರತದ ಈಗಿನ ಬಿಜೆಪಿ ಸರ್ಕಾರದೊಂದಿಗೆ ಯಾವುದೇ ಅರ್ಥಪೂರ್ಣ ಮಾತುಕತೆ ಸಾಧ್ಯವೇ ಇಲ್ಲ ಎಂದಿದ್ದಾರೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್..
ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ಘರ್ಷಣೆಯಿಂದಾಗಿ ದಕ್ಷಿಣ ಏಷ್ಯಾ ಹಿನ್ನಡೆಗೊಳಗಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದವು ಈ ಪ್ರದೇಶದ ಅಭಿವೃದ್ಧಿಯನ್ನು ಕುಂಠಿತವಾಗಿಸುವ ಅತಿ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿನ ಸರ್ಕಾರ ಎಲ್ಲಿಯವರೆಗೆ ಧಾರ್ಮಿಕ ಸಿದ್ಧಾಂತಗಳಿಂದ ಪ್ರೇರಿತವಾಗಿರುತ್ತೋ ಅಲ್ಲಿಯವರೆಗೆ ಭಾರತದೊಂದಿಗೆ ಅರ್ಥಪೂರ್ಣ ಸಂವಾದ ಅಸಾಧ್ಯ ಎಂದು ಹೇಳಿದ್ದಾರೆ.
ನಾನು ಹಿಂದೂ, ಹಿಂದುತ್ವವಾದಿ ಅಲ್ಲ : ರಾಹುಲ್ ಗಾಂಧಿ
ಮುಂದೊಂದು ದಿನ ಭಾರತವು ವಿವೇಚನಾಶೀಲ ಸರ್ಕಾರವನ್ನು ಹೊಂದಲಿದೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ತಾರ್ಕಿಕ ಚರ್ಚೆಗಳ ಮೂಲಕ ವಿವಾದಗಳನ್ನು ಬಗೆಹರಿಸಬಹುದು. ವಿಶೇಷವಾಗಿ ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿದ ಬಳಿಕ ಉಭಯ ದೇಶಗಳು ಜಂಟಿಯಾಗಿ ಭಯೋತ್ಪಾದನೆ ಹಾಗೂ ಹವಾಮಾನ ಬದಲಾವಣೆ ವಿರುದ್ಧ ಹೋರಾಡಬಹುದಾಗಿದೆ. ಆದರೂ ಭಾರತದೊಂದಿಗೆ ನಮ್ಮ ಶಾಂತಿಯ ಪ್ರಸ್ತಾಪವನ್ನು ದೌರ್ಬಲ್ಯ ಎಂದು ಪರಿಗಣಿಸುವುದರಿಂದ ನಿರಾಸೆಯಾಗಿದೆ ಎಂದು ಮತ್ತದೇ ಹಳೇ ನಾಟಕ ಮುಂದುವರೆಸಿದ್ಧಾರೆ ಉಗ್ರರ ಪೋಷಕ ರಾಷ್ಟ್ರದ ಮಾನ್ಯ ಪ್ರಧಾನಿಗಳು..