ಮೋದಿ ಕಣ್ಣೀರು : ಆಸ್ಕರ್ ಅವಾರ್ಡ್ ಕೊಡಬೇಕೆಂದ ವರ್ಮಾ
ನವದೆಹಲಿ : ಸದಾ ಒಂದಿಲ್ಲೊಂದು ವಿವಾದವನ್ನ ಮೇಲೆ ಎಳೆದುಕೊಳ್ಳುವ ನಿರ್ದೆಶಕ ರಾಮ್ ಗೋಪಾಲ್ ವರ್ಮಾ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಆಸ್ಕರ್ ಅವಾರ್ಡ್ ನೀಡಬೇಕು ಎಂದು ಟ್ವೀಟ್ ಮಾಡಿ ಸದ್ದು ಮಾಡಿದ್ದಾರೆ.
ಇತ್ತೀಚಿಗಷ್ಟೆ ವಾರಾಣಸಿಯಲ್ಲಿನ ವೈದ್ಯರು ಮತ್ತು ಮುಂಚೂಣಿ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್‍ನಿಂದ ಮೃತಪಟ್ಟವರ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾವುಕರಾದರು.
ಇದನ್ನ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿವೆ. ಇದು ಮೊಸಳೆ ಕಣ್ಣೀರು ಎಂದು ವ್ಯಂಗ್ಯವಾಡಿವೆ.
ಮೋದಿ ಕಣ್ಣೀರಿನ ಬಗ್ಗೆ ಸೊಶಿಯಲ್ ಮೀಡಿಯಾದಲ್ಲಿ ಕೂಡ ನಾನಾ ಮಿಮ್ ಗಳು ಹರಿದಾಡುತ್ತಿವೆ.
ಈ ಮಧ್ಯೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಅಣುಕಿಸಿದ್ದು, ಮೋದಿಯವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕೆಂದು ಕಾಲೆಳೆದಿದ್ದಾರೆ.
THE BEST OSCAR EVER🙏🙏🙏 pic.twitter.com/KRfD0UTlrb
— Ram Gopal Varma (@RGVzoomin) May 22, 2021
ಆಸ್ಕರ್ ಪ್ರಶಸ್ತಿ ನೀಡುತ್ತಿರುವ ಕಾರ್ಯಕ್ರಮದ ಜೊತೆ ಮೋದಿ ಭಾವುಕರಾದ ದೃಶ್ಯಗಳನ್ನು ಜೋಡಿಸಿ ಎಡಿಟ್ ಮಾಡಲಾದ ವಿಡಿಯೋ ಕ್ಲಿಪ್ ವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.