ಡಿಜಿಟಲ್ ಆರೋಗ್ಯ ಮಿಷನ್ ಗೆ ಮೋದಿ ಚಾಲನೆ

1 min read
pm modi

ಡಿಜಿಟಲ್ ಆರೋಗ್ಯ ಮಿಷನ್ ಗೆ ಮೋದಿ ಚಾಲನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಡಿಜಿಟಲ್ ಆರೋಗ್ಯ ಮಿಷನ್‍ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಆರೋಗ್ಯ ಮಿಷನ್ ಘೋಷಿಸಿದ್ದರು.

ಇನ್ನು ಇಂದು ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನರೇಂದ್ರ ಮೋದಿ, ಈ ದಿನ ತುಂಬ ಮಹತ್ವದ್ದಾಗಿದೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದೇ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟಿಸಲಾಗಿದೆ.

Digital Health Mission saaksha tv

ಇದು ಪಂಡಿತ್ ಜೀ ಅವರಿಗೆ ಸಮರ್ಪಿತ. ಇಂದಿನಿಂದಲೇ ಇಡೀ ರಾಷ್ಟ್ರಕ್ಕೆ ಈ ಯೋಜನೆ ಅನ್ವಯ ಆಗಲಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ.

ಆ ಪ್ರಯತ್ನದ ಒಂದು ಭಾಗವಾಗಿ ಇಂದು ಅತ್ಯಂತ ಮಹತ್ವದ, ಮುಖ್ಯವಾದ ಹಂತಕ್ಕೆ ಕಾಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇನ್ನು ಇಂದು ಡಿಜಿಟಲ್ ಆರೋಗ್ಯ ಮಿಷನ್ ಲಾಂಚ್ ಮಾಡುವ ಬಗ್ಗೆ ಪ್ರಧಾನಿಗಳು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd