“ಮೋದಿ ಮನ್ ಕಿ ಬಾತ್” ಅರ್ಥಹೀನ : ರಾಹುಲ್ ಗಾಂಧಿ Modi
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಅರ್ಥಹೀನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇಂದು ಎನ್ ಡಿ ಎ 2.0ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಾಗೂ 77ನೇ ಅವೃತ್ತಿಯ ‘ಮನ್ ಕಿ ಬಾತ್’ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ 2ನೇ ಅಲೆಯ ವೇಳೆ ದೂರದ ಪ್ರದೇಶಗಳೀಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿದವರಿಗೆ, ಯಾಸ್ ಮತ್ತು ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದವರನ್ನು ಶ್ಲಾಘಿಸಿದ್ದರು.
ಮೋದಿ ಮನ್ ಕಿ ಬಾತ್ ಬಗ್ಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ರಾಹುಲ್ ಗಾಂಧಿ, “ಕೊರೊನಾ ವಿರುದ್ಧ ಹೋರಾಡಲು ನಿಮಗೆ ಸರಿಯಾದ ಉದ್ದೇಶ, ನೀತಿ, ದೃಢ ನಿಶ್ಚಯದ ಅಗತ್ಯವಿದೆ. ಇದನ್ನು ಬಿಟ್ಟು ತಿಂಗಳಿಗೊಮ್ಮೆ ಬಂದು ಅರ್ಥಹೀನ ಮಾತುಗಳನ್ನಾಡುವುದಲ್ಲ ಎಂದು ಟೀಕಿಸಿದ್ದಾರೆ.