Modi ತೈಲ ಬೆಲೆ ಏರಿಕೆ ಕುರಿತು ಮೋದಿ ಯಾಕೆ ಚರ್ಚಿಸುತ್ತಿಲ್ಲ : ರಾಹುಲ್
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಡಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿ ತೈಲ ಬೆಲೆ ಏರಿಕೆ ವಿಚಾರವಾಗಿ ಯಾಕೆ ಮೋದಿಯವರು ಚರ್ಚೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ವಿಚಾರವಾಗಿ ಮೊದಲಿನಿಂದಲೂ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುತ್ತಲೇ ಇದ್ದಾರೆ. ಇದರ ಮುಂದುವರಿದ ಭಾಗವಾಗಿ ಟ್ವಿಟ್ಟರ್ ನಲ್ಲಿ ಮೋದಿ ಕಾಲೆಳೆದಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ, ವಾಹನಗಳಿಗೆ ಇಂಧನ ತುಂಬಿಸುವುದು ಸಹ ಯಾವುದೇ ಪರೀಕ್ಷೆಗಿಂತಲೂ ಕಡಿಮೆ ಇಲ್ಲ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಪಡೆದುಕೊಳ್ಳುತ್ತಿದೆ. ಇಂತಹ ವಿಷಯಗಳ ಬಗ್ಗೆ ಪ್ರಧಾನಿ ಏಕೆ ಚರ್ಚೆ ನಡೆಸುವುದಿಲ್ಲ ಎಂದು ಕೇಳಿದ್ದಾರೆ.
ಜನಸಾಮಾನ್ಯರು ಖರ್ಚು ಮಾಡುವ ಎಲ್ಲ ವಿಷಯಗಳ ಮೇಲೂ ಚರ್ಚೆಗಳು ನಡೆಯಬೇಕು ಎಂದು ಬರೆದುಕೊಂಡಿದ್ದಾರೆ.
