ಮೋದಿ ಹೊಗಳಿದ್ದು ಟಾಲಿವುಡ್ – ರಾಮ್ ಗೋಪಾಲ್ ವರ್ಮಾ ಎಳೆದುತಂದಿದ್ದು ಸ್ಯಾಂಡಲ್ ವುಡ್
ರಾಮ್ ಗೋಪಾಲ್ ವರ್ಮಾ ಸದಾ ಒಂದಿಲ್ಲೊಂದುನ ವಿಷಯಗಳಿಗೆ ಸುದ್ದಿಯಲ್ಲಿರುತ್ತಾರೆ.. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈ ಭಾರಿ ನೇರವಾಗಿ ನರೇಂದ್ರ ಮೋದಿ ಹೇಳಿಕೆಯನ್ನೆ ಟಾರ್ಗೇಟ್ ಮಾಡಿದ್ದಾರೆ. ಸದಾ ಯುವ ನಟಿಯರ ಜೊತೆ ಕಾಲ ಕಳೆಯುತ್ತಾ ದೊಡ್ಡ ದೊಡ್ಡ ಸ್ಟಾರ್ ಗಳ ವಿರುದ್ಧ ತೊಡೆ ತಟ್ಟುವ ರಾಮ್ ಗೋಪಾಲ್ ವರ್ಮಾ ಟೀಕಿಸದೇ ಯಾರನ್ನೂ ಬಿಟ್ಟಿಲ್ಲ.
ಕೆಲ ದಿನಗಳ ಹಿಂದೆ ಸಂತ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನ ಉದ್ಘಾಟಿಸಲು ಮೋದಿ ಹೈದ್ರಾಬಾದ್ ಗೆ ಬಂದಿಳಿದಿದ್ದರು. ಈ ವೇಳೆ ಪ್ರಧಾನಿ ಮೋದಿ “ ತೆಲುಗು ಚಿತ್ರರಂಗ ಪ್ರಪಂಚದಾದ್ಯಂತನ ಹೆಸರು ಮಾಡುತ್ತಿದೆ. ಟಾಲಿವುಡ್ ನ ಜನಪ್ರಿಯತೆ ತೆಲುಗು ನಾಡಿಗೆ ,ಮಾತ್ರ ಸೀಮಿತವಾಗಿಲ್ಲ ಬೇರೆ ಬೇರೆ ರಾಷ್ಟ್ರಗಳು ತೆಲುಗು ಬಗ್ಗೆ ಚರ್ಚಿಸುತ್ತಾರೆ. ಹೊರದೇಶಗಳಲ್ಲೂ ತೆಲುಗು ಚಿತ್ರಗಳನ್ನ ನೋಡಲು ಇಷ್ಟ ಪಡುತ್ತಾರೆ ಎಂದು ಹೊಗಳಿದ್ದರು.
ರಾಜಾಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾವನ್ನ ಈ ಹಿಂದೆ ಹಲವು ಭಾರಿ ಹೊಗಳಿದ್ದರು. ಕಳೆದ ವರ್ಷ ತೆರೆಕಂಡ ಪುಷ್ಪಾ ಚಿತ್ರ ಕೂಡ ಒಳ್ಳೆಯ ಹೆಸರು ಮಾಡಿತ್ತು. ಈ ಚಿತ್ರಗಳನ್ನ ಮೋದಿ ಹೊಗಳಿದ್ದರು. ನಮ್ಮ ಚಿತ್ರರಂಗದ ಹೆಮ್ಮೆ ಎಂದಿದ್ದರು.
ಆದರೆ ಇದಕ್ಕೆ ರಾಮ್ ಗೋಪಾಲ್ ವರ್ಮಾ ವ್ಯತಿರಿಕ್ತವಾಗಿ ಟೀಕೆ ಮಾಡಿದ್ದಾರೆ. ‘ ಪ್ರಧಾನಿ ಮೋದಿ ಟಾಲಿವುಡ್ ಹೊಗಳಿದ್ದಕ್ಕೆ ಸಂತಸ ಪಡುವ ಅಗತ್ಯವಿಲ್ಲ ಟಾಲಿವುಡ್ ಶಾಂಪೇನ್ ಜೊತೆ ಬ್ರೇಕ್ ಡ್ಯಾನ್ಸ್ ಮಾಡುವ ಅಗತ್ಯವಿಲ್ಲ. ಮೋದಿ ಕೇವಲ ಬಾಹುಬಲಿ ಮತ್ತು ಪುಷ್ಪ ಚಿತ್ರವನ್ನ ಮಾತ್ರ ಹೊಗಳಿದ್ದಾರೆ. ನಾವು ಪ್ರತಿ ವರ್ಷ ಮಾಡುವ 150 ಚಿತ್ರಗಳನ್ನಲ್ಲ. ರಾಜಮೌಳಿ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ವುಡ್ ನ ಹೊಗಳುತ್ತಿದ್ದರು ಎಂದಿದ್ದಾರೆ. ಆ ದಿಗ್ಗಜರಿಂದ ಟಾಲಿವುಡ್ ನ ಖ್ಯಾತಿ ಹೆಚ್ಚಿದೆ. ಎಲ್ಲಾ ಚಿತ್ರಗಳು ಕಾರಣವಾಗಿಲ್ಲ ಎಂಬ ಅರ್ಥ ದಲ್ಲಿ ಹೇಳಿದ್ದಾರೆ.