ಕಣ್ಣೀರಾಕುತ್ತಾ ಗುಲಾಂ ನಬಿ ಆಜಾದ್ ಗೆ ಸಲ್ಯೂಟ್ ಮಾಡಿದ ಮೋದಿ
ನವದೆಹಲಿ : ರಾಜ್ಯಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಲೀಡರ್ ಗುಲಾಂ ನಬಿ ಆಜಾದ್ ಅವರ ವಿದಾಯದ ವೇಳೆ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಪ್ರಧಾನಿ ತಮ್ಮ ಭಾಷಣದ ವೇಳೆ ಕಣ್ಣೀರು ಹಾಕುತ್ತಾ ಗುಲಾಂ ನಬಿ ಆಜಾದ್ ಗೆ ಸಲ್ಯೂಟ್ ಮಾಡಿದ್ದಾರೆ.
ಹೌದು..! ಇಂದು ರಾಜ್ಯಸಭೆಯಲ್ಲಿ ಮಾತನಾಡುತ್ತಾ ಮೋದಿ ಗುಲಾಂ ನಬಿ ಆಜಾದ್ ಅವರನ್ನ ಶ್ಲಾಘಿಸುತ್ತಾ ಹಿಂದೆ ನಡೆದ ಘಟನೆಯೊಂದನ್ನು ನೆನೆದು ಬಾವುಕರಾದ್ರು. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಲಾಂ ನಬಿ ಆಜಾದ್ ಜಮ್ಮು ಕಾಶ್ಮೀರದ ಸಿಎಂ ಆಗಿದ್ದರು. ಈ ವೇಳೆ ಗುಜರಾತಿನ ಪ್ರಯಾಣಿಕರು ಜಮ್ಮು ಕಾಶ್ಮೀರಕ್ಕೆ ಹೋಗಿದ್ದರು. ಈ ವೇಳೆ ಅವರ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಮೋದಿ ಭಾಷಣದಲ್ಲಿ ಒಂದು ಸಲ ಗುಜರಾತಿನ ಪ್ರಯಾಣಿಕರು ಜಮ್ಮು ಕಾಶ್ಮೀರಕ್ಕೆ ಹೋಗಿದ್ದಾಗ ಅವರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ಜಮ್ಮುವಿನ ಸಿಎಂ ಆಗಿದ್ದ ಗುಲಾಂ ನಬಿ ಆಜಾದ್ ಅವರಿಗೆ ನಂಗೆ ಫೋನ್ ಕಾಲ್ ಬಂತು. ಅದು ಕೇಲವ ಸೂಚನೆ ನೀಡುವ ಕಾಲ್ ಆಗಿರಲಿಲ್ಲ ಎಂದು ನಮೋ ಭಾವುಕರಾದ್ರು.
ಇನ್ನು ಆಗ ಪ್ರಣಬ್ ಮುಖರ್ಜಿ ರಕ್ಷಣಾ ಸಚಿವರಾಗಿದ್ರು. ಆಗ ನಾನು ಪ್ರಣಬ್ ಮುಖರ್ಜಿಗೆ ಕಾಲ್ ಮಾಡಿ, ಮೃತದೇಹಗಳನ್ನ ತರಲು ಸೇನಾ ವಿಮಾನ ಸಿಗುತ್ತಾ ಅಂತ ಕೇಳ್ದೆ. ಪ್ರಣಬ್ ಮುಖರ್ಜಿ, ನೀವ್ ಟೆನ್ಷನ್ ತಗೋಬೇಡಿ, ಅದರ ವ್ಯವಸ್ಥೆ ಮಾಡ್ತೀನಿ ಅಂದ್ರು. ಇದಾದ ಬಳಿಕ ಆಜಾದ್ ಅವರು ಮತ್ತೆ ನನಗೆ ಕಾಲ್ ಮಾಡಿದ್ರು. ಆಗ ಅವರು ಏರ್ ಪೋರ್ಟ್ ನಿಂದಲೇ ಕಾಲ್ ಮಾಡಿದ್ರು ಎಂದು ಎರಡನೇ ಸಲ ಭಾವುಕರಾದ್ರು. ಆ ಸಂದರ್ಭದಲ್ಲಿ ಆಜಾದ್ ಅವರ ಗುಜರಾತ್ ನ ಪ್ರಯಾಣಿಕರನ್ನ ತಮ್ಮ ಕುಟುಂಬ ಸದಸ್ಯರಂತೆ ನೋಡಿದ್ರು. ಅಂತಹ ಮನುಷ್ಯ ಎಂದು ಗುಲಾಂಬಿ ನಬಿ ಆಜಾದ್ ಕಡೆ ಬೊಟ್ಟು ಮಾಡಿ ಮೋದಿ ಮತ್ತೆ ಭಾವುಕರಾದ್ರು.
ಮುಂದುವರಿದ ಮಾತನಾಡಿದ ಮೋದಿ, ಅಧಿಕಾರ, ಹುದ್ದೆಗಳು ಜೀವನದಲ್ಲಿ ಬಂದು ಹೋಗ್ತಾ ಇರುತ್ತವೆ. ಆದ್ರೆ ಜೀವನದಲ್ಲಿ ಅದನ್ನ ಹೇಗೆ ಜೀರ್ಣಿಸಿಕೊಳ್ಳಬೇಕು ಅನ್ನೋದು ಇವರಿಗೆ ಗೊತ್ತು ಎಂದು ಗುಲಾಂ ನಬಿ ಆಜಾದ್ ಅವರಿಗೆ ಸಲ್ಯೂಟ್ ಮಾಡಿದ್ರು. ಮರುದಿನ ಮತ್ತೆ ನಂಗೆ ಕಾಲ್ ಮಾಡಿದ ಗುಲಾಂ ನಬಿ ಆಜಾದ್, ಮೋದಿಜಿ ಎಲ್ಲರೂ ಬಂದ್ರಾ ಅಂತ ಕೇಳಿದ್ರು. ಹೀಗಾಗಿ ಒಬ್ಬ ಮಿತ್ರನ ರೂಪದಲ್ಲಿ ಅವರನ್ನ ಘಟನೆ ಮತ್ತು ಅನುಭವದ ಆಧಾರದಲ್ಲಿ ನಾನು ಗೌರವಿಸುತ್ತೇನೆ. ನೀವು ಯಾವತ್ತೂ ಕೂಡ ಈ ಸದನದಲ್ಲಿ ಇಲ್ಲ ಅಂದುಕೊಳ್ಳಬೇಡಿ. ನಿಮಗಾಗಿ ನನ್ನ ಬಾಗಿಲು ಯಾವತ್ತೂ ತೆರೆದಿರುತ್ತೆ. ನಿಮ್ಮ ವಿಚಾರ ಮತ್ತು ಸಲಹೆಗಳು ಈ ದೇಶಕ್ಕೆ ಬೇಕಾಗಿದೆ. ನಿಮ್ಮ ಅನುಭವ ದೇಶಕ್ಕೆ ತುಂಬಾ ಬೇಕಾಗುತ್ತೆ. ನೀವು ನಿವೃತ್ತಿ ಹೊಂದಲು ನಾನು ಬಿಡೋದಿಲ್ಲ. ನಿಮಗೆ ಮತ್ತೊಮ್ಮೆ ಶುಭಾಶಯ.. ಧನ್ಯವಾದಗಳು’ ಎಂದು ಹೇಳಿ ಮೋದಿ ಮಾತು ಮುಗಿಸಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel