Rizwan : ಕೊಹ್ಲಿ ಫಾರ್ಮ್ ಗೆ ಬರಬೇಕೆಂದು ಪಾಕ್ ಕ್ರಿಕೆಟಿಗ ದೇವರಿಗೆ ಪ್ರಾರ್ಥನೆ

1 min read
mohammad-rizwan-has-say-virat-kohli-struggles saaksha tv

mohammad-rizwan-has-say-virat-kohli-struggles saaksha tv

Rizwan : ಕೊಹ್ಲಿ ಫಾರ್ಮ್ ಗೆ ಬರಬೇಕೆಂದು ಪಾಕ್ ಕ್ರಿಕೆಟಿಗ ದೇವರಿಗೆ ಪ್ರಾರ್ಥನೆ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಪಾಕಿಸ್ತಾನ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್, ರನ್ ಮಷಿನ್ ಕಳಪೆ ಫಾರ್ಮ್ ಬಗ್ಗೆ ಆತಂಕಗೊಂಡಿದ್ದಾರೆ.

ಕೊಹ್ಲಿ ಮತ್ತೆ ಫಾರ್ಮ್‌ಗೆ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ರಿಜ್ವಾನ್ ಹೇಳಿದ್ದಾರೆ.

ಕೊಹ್ಲಿ ಚಾಂಪಿಯನ್ ಆಟಗಾರರಾಗಿದ್ದು, ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಜಯಿಸಲಿ ಎಂದು ಹಾರೈಸಿದ್ದಾರೆ.

mohammad-rizwan-has-say-virat-kohli-struggles saaksha tv
mohammad-rizwan-has-say-virat-kohli-struggles saaksha tv

ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದಲ್ಲಿ ಏರಿಳಿತಗಳು ಸಹಜ, ಕೊಹ್ಲಿ ಶೀಘ್ರದಲ್ಲೇ ಮೊದಲಿಗಿಂತ ಅಸಾಧಾರಣ ಫಾರ್ಮ್ ಗೆ ಬರಲಿದ್ದಾರೆ. 

ಸದ್ಯ ಟೀಂ ಇಂಡಿಯಾದ ನ್ಯೂ ವಾಲ್ ಪೂಜಾರ ಹಾಗೂ ಇಂಗ್ಲೆಂಡ್ ಕೌಂಟಿ ಪರ ಆಡುತ್ತಿರುವ ರಿಜ್ವಾನ್ ಕ್ರಿಕ್ ವಿಕ್ ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ರಿಜ್ವಾನ್ ಕೊಹ್ಲಿಯನ್ನು ಅಪ್ಪಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.  mohammad-rizwan-has-say-virat-kohli-struggles

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd