Mohammed Shami : ಶಮಿ ಸಂಚಲನ.. ಟೀಂ ಇಂಡಿಯಾದ ಮೊದಲ ಬೌಲರ್
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಮೈಲುಗಲ್ಲನ್ನು ತಲುಪಿದ್ದಾರೆ.
ಆ ಮೂಲಕ ಶಮಿ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 150 ವಿಕೆಟ್ ಗಳಿಸಿದ ಮೂರನೇ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದರು.
ಶಮಿ 80 ಪಂದ್ಯಗಳಲ್ಲಿ 150 ವಿಕೆಟ್‌ಗಳ ಗಡಿಯನ್ನು ತಲುಪಿದ್ದಾರೆ ಮತ್ತು ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ವೇಗವಾಗಿ 150 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ನೋಡಿದ್ರೆ
ಆಸ್ಟ್ರೇಲಿಯಾದ ಸ್ಟಾರ್ ಮಿಚೆಲ್ ಸ್ಟಾರ್ಕ್ (77 ಪಂದ್ಯಗಳು) ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮಾಜಿ ಸ್ಟಾರ್ ಸಕ್ಲೇನ್ ಮುಷ್ತಾಕ್ (78 ಪಂದ್ಯಗಳು) ಎರಡನೇ ಸ್ಥಾನದಲ್ಲಿದ್ದಾರೆ,
ರಶೀದ್ ಮತ್ತು ಶಮಿ ನಂತರ, ಟ್ರೆಂಟ್ ಬೌಲ್ಟ್ (81 ಪಂದ್ಯಗಳು) ಮತ್ತು ಬ್ರೆಟ್ ಲೀ (82 ಪಂದ್ಯಗಳು) ನಾಲ್ಕು, ಐದನೇ ಸ್ಥಾನದಲ್ಲಿದ್ದಾರೆ.

ಅಂದಹಾಗೆ ಶಮಿ ಟೀಂ ಇಂಡಿಯಾದಿಂದ ವೇಗವಾಗಿ 150 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಅಜಿತ್ ಅಗರ್ಕರ್ 97 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಚೆಂಡುಗಳ ವಿಷಯದಲ್ಲಿ, ಶಮಿ ಅತ್ಯಂತ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡರು.
ಶಮಿ 150 ವಿಕೆಟ್‌ಗಳ ಗಡಿ ತಲುಪಲು 4071 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ಮಿಚೆಲ್ ಸ್ಟಾರ್ಕ್ (3857 ಎಸೆತ) ಮೊದಲ ಸ್ಥಾನದಲ್ಲಿದ್ದಾರೆ.
ಅಜಂತಾ ಮೆಂಡಿಸ್ (4029 ಎಸೆತ), ಸಕ್ಲೈನ್ ಮುಷ್ತಾಕ್ (4035 ಎಸೆತ), ರಶೀದ್ ಖಾನ್ (4040 ಎಸೆತ). ಕ್ರಮವಾಗಿ 2, 3 ಮತ್ತು 4 ನೇ ಸ್ಥಾನಗಳಲ್ಲಿದ್ದಾರೆ.