ನವದೆಹಲಿ: ದೇಶದಲ್ಲಿ ಕೊರೊನಾ ರುದ್ರತಾಂಡವ ಮುಂದುವರೆದಿದೆ. ಇದರಿಂದಾಗಿ ಈವರೆಗೂ ಬೃಹತ್ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಈವರೆಗೂ ಅವಕಾಶ ನೀಡಲಾಗಿಲ್ಲ. ಅದರಂತೆ ಮುಸ್ಲಿಂ ಸಮುದಾಯದ ಮೊಹರಂ ಹಬ್ಬದ ದಿನದಂದು ಮೆರವಣಿಗೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಈ ಮಹತ್ವದ ತೀರ್ಪು ನೀಡಿದೆ. ದೇಶಾದ್ಯಂತ ಮೊಹರಂ ಮೆರವಣಿಗೆ ನಡೆಸಲು ಅನುಮತಿ ನೀಡಲು ನಿರಾಕರಿಸಿದೆ.