Virat ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ನಡೆ ಬಗ್ಗೆ ಇಂಗ್ಲೆಂಡ್ ಬೌಲರ್ ಹೇಳಿದ್ದೇನು..?
ಕ್ರಿಕೆಟ್ ಸರ್ಕಲ್ ನಲ್ಲಿ ಪ್ರಸ್ತುತ ಅತಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ಅಂದ್ರೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಾರ್ಮ್.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಗಳಿಸಿ ಸುಮಾರು 1000 ದಿನಗಳು ಕಳೆಯುತ್ತಿವೆ.
ಸದ್ಯದ ವಿರಾಟ್ ಫಾರ್ಮ್ ಬಗ್ಗೆ ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
ಇದರಲ್ಲಿ ಕೆಲವರು ವಿರಾಟ್ ಗೆ ಸಪೊರ್ಟ್ ಮಾಡುತ್ತಿದ್ದರೇ ಇನ್ನೂ ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ.
ಇದೀಗ ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಇಂಗ್ಲೆಂಡ್ನ ಮಾಜಿ ಬೌಲರ್ ಮಾಂಟಿ ಪನೇಸರ್ ಮಾತನಾಡಿದ್ದು, ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ವಿಫಲವಾಗುತ್ತಿದ್ದರೂ ಬಿಸಿಸಿಐ ಅವರಿಗೆ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ತಮ್ಮದೇಯಾದ ವಾದ ಮಂಡಿಸಿದ್ದಾರೆ.
ವಿಶ್ವದಾದ್ಯಂತ ಭಾರಿ ಫಾಲೋಯಿಂಗ್ ಇರುವ ವಿರಾಟ್ ಕೊಹ್ಲಿಗೆ ಕೋಕ್ ನೀಡಿದ್ರೆ ಸ್ಪಾನ್ಸರ್ ರೂಪದಲ್ಲಿ ಬಿಸಿಸಿಐ ಭಾರಿ ನಷ್ಟಕ್ಕೆ ಗುರಿಯಾಗುತ್ತದೆ.
ಅದ್ದರಿಂದಲೇ ಬಿಸಿಸಿಐ ವಿರಾಟ್ ಕೊಹ್ಲಿಗೆ ಕೋಕ್ ನೀಡುವ ಧೈರ್ಯ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೇವಲ ಹಣಕ್ಕಾಗಿಯೇ ಬಿಸಿಸಿಐ ಇದೆಲ್ಲಾ ಮಾಡುತ್ತಿದೆ. ಇದರಿಂದ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಗೆಲ್ಲುವ ಅವಕಾಶಗಳು ತೀರಾ ಕಡಿಮೆಯಾಗಲಿವೆ.
ಕೊಹ್ಲಿಯನ್ನ ಟೀಂ ಇಂಡಿಯಾದಿಂದ ತೆಗೆದು ಹಾಕಿದ್ರೆ ಕೆಲವು ಕಂಪನಿಗಳು ದಿವಾಳಿ ಆಗಲಿವೆ.
ಆದ್ದರಿಂದಲೇ ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಎಚ್ಚರಿಕೆಯ ಹೆಜ್ಜೆಯನ್ನ ಇಡುತ್ತಿದೆ ಎಂದು ಹೇಳಿದ್ದಾರೆ.