ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಬಂಧನ
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತು. 12 ಗಂಟೆಗಳ ವಿಚಾರಣೆಯ ನಂತರ ಸೋಮವಾರ ತಡರಾತ್ರಿ ದೇಶಮುಖ್ ಅವರನ್ನು ಬಂಧಿಸಲಾಗಿದೆ.
ಮಹರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ 100 ಕೋಟಿ ಲಂಚ ಕೇಳಿರುವುದಾಗಿ ಮಾಜಿ ಪೊಲೀಸ್ ಪೊಲೀಷ್ ಕಮೀಷನರ್ ಪರಂಬೀರ್ ಸಿಂಗ್ ಆರೋಪ ಮಾಡಿದ್ದರು. ಈ ಬಗ್ಗೆ ಇಡಿ ( ಜಾರಿ ನಿರ್ದೇಶನಾಲಯ ) ಪಿ ಎಂ ಎಲ್ ಎ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ಸಮನ್ಸ್ ಜಾರಿಗೊಳಿಸಿತ್ತು.ಈ ಆರೋಪದ ನಂತರ ದೇಶ್ ಮುಖ್ ಗೃಹ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಎನ್ ಸಿ ಪಿ ಮುಖಂಡ ಅನಿಲ್ ದೇಶ್ ಮುಖ್ ಸೋಮವಾರ ಇಡಿ ಕಛೇರಿಗೆ ಬಂದು ವಿಚಾರಣೆಗೆ ಒಳಗಾಗಿದ್ದರು. 14 ಗಂಟೆಗಳ ವಿಚಾರಣೆಯ ನಂತರ ದೇಶ್ ಮುಖ್ ಅವರನ್ನ ಬಂಧಿಸಿರುವುದಾಗಿ ಇ ಡಿ ಹೇಳಿದೆ. ತಮ್ಮ ಮೇಲಿನ್ ಸಮನ್ಸ್ ರದ್ದು ಗೊಳಿಸುವಂತೆ ಬಾಂಬೆ ಹೈಕೋರ್ಟ್ ಗೆ ದೇಶ್ ಮುಖ್ ಅರ್ಜಿಯನ್ನ ಸಲ್ಲಿಸಿದ್ದರು. ಸಮನ್ಸ್ ರದ್ದು ಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.