ಕೇರಳ ಕರಾವಳಿಗೆ ಮಾನ್ಸೂನ್ ಪ್ರವೇಶ – ಕರಾವಳಿ ಕರ್ನಾಟಕದಲ್ಲಿ ಇಂದಿನಿಂದ ಎಲ್ಲೋ ಅಲರ್ಟ್
ಜೂನ್ 1 ರಿಂದ ಕೇರಳ ಕರಾವಳಿಗೆ ಮಾನ್ಸೂನ್ ಪ್ರವೇಶಿಸುವ ಸೂಚನೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕದಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಿದೆ. ಜೂನ್ 1 ರ ಮಂಗಳವಾರದಿಂದ ಕರಾವಳಿಯಲ್ಲಿ ಉತ್ತಮ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮೇ 30 ರ ಭಾನುವಾರ ಉತ್ತಮ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಜಿಲ್ಲೆಯಲ್ಲಿ ಭಾನುವಾರ, ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿದ್ದರೂ, ಗ್ರಾಮೀಣ ಪ್ರದೇಶಗಳಿಗೆ ಭಾನುವಾರ ಉತ್ತಮ ಮಳೆಯಾಗಿದೆ.
ಬೆಳ್ತಂಗಡಿಯ ನಾವೂರುನಲ್ಲಿ 58 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅರಶಿನಮಕ್ಕಿ, ಶಿಶಿಲಾ, ಉಜಿರೆ ಯಲ್ಲಿ ಕೂಡ ಉತ್ತಮ ಮಳೆಯಾಗಿದೆ. ಕಡಬ, ಬಂಟ್ವಾಳ, ಪುತ್ತೂರು ಮತ್ತು ಮೂಡುಬಿದಿರೆ ತಾಲ್ಲೂಕುಗಳಲ್ಲಿ ಸಹ ಸಾಕಷ್ಟು ಪ್ರಮಾಣದ ಮಳೆಯಾಗಿದೆ. ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಮೋಡ ಕವಿದ ವಾತಾವರಣ ಮತ್ತು ಬಿಸಿಲು ಇದ್ದು, ಭಾನುವಾರ ರಾತ್ರಿ ಸ್ವಲ್ಪ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರದಂದು ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬ್ರಹ್ಮಾವರ, ಕಾರ್ಕಳ ಮತ್ತು ಉಡುಪಿ ತಾಲ್ಲೂಕುಗಳಿಗೆ ಭಾರಿ ಮಳೆಯಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಚಿಕಿತ್ಸೆಯಲ್ಲಿ ಸತು ಎಷ್ಟು ಪರಿಣಾಮಕಾರಿ? ಯಾವ ಆಹಾರ ಸೇವನೆಯಿಂದ ಸತುವನ್ನು ಪಡೆಯಬಹುದು?#Saakshatv #healthtips #zincbeneficial #coronatreatment https://t.co/7DuN8YHYEh
— Saaksha TV (@SaakshaTv) May 28, 2021
ಇನ್ನು ಮುಂದೆ ಆನ್‌ಲೈನ್ ನಲ್ಲಿ ಆಧಾರ್ ಮರುಮುದ್ರಣ ಸಾಧ್ಯವಿಲ್ಲ!#UIDAI #Aadhaar #reprint https://t.co/CmkUBpFY20
— Saaksha TV (@SaakshaTv) May 29, 2021
ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ#Udupi #Shiroormutt https://t.co/0e2wwvp7Wk
— Saaksha TV (@SaakshaTv) May 29, 2021
ರಾತ್ರಿ ಮಲಗುವ ಮೊದಲು ಬಿಸಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರ ಪ್ರಯೋಜನಗಳು#Saakshatv #healthtips #ghee #milk https://t.co/SIi4LM1jhG
— Saaksha TV (@SaakshaTv) May 29, 2021
ತೊಂಡೆಕಾಯಿ ಬಜ್ಜಿ#Saakshatv #cookingrecipe #thondekayibajji https://t.co/pfPteVFxqX
— Saaksha TV (@SaakshaTv) May 29, 2021
#Monsoon #Kerala #Yellow #coastalKarnataka