ಮೇ ಅಂತ್ಯದ ವೇಳೆಗೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಸಾಧ್ಯತೆ…

1 min read
Karnataka

ಮೇ ಅಂತ್ಯದ ವೇಳೆಗೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಸಾಧ್ಯತೆ…

ರಾಜ್ಯದಲ್ಲಿ ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಬರಬೇಕಿದ್ದ  ಮುಂಗಾರು ಮಳೆ ಈ ಬಾರಿ ಅವಧಿಗಿಂತ ಮುಂಚೆಯೇ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ.  ಈ ಭಾರಿ ವಾಡಿಕೆಗಿಂತ ಮೊದಲೆ ಮಾನ್ಸೂನ್ ಮಳೆ ಆಗಮಿಸಲಿದೆ ಎಂದಿ ಭಾರತೀಯ ಹವಮಾನ ಇಲಾಖೆ  ಮಾಹಿತಿ ನೀಡಿದೆ.

ನೈರುತ್ಯ ಮುಂಗಾರು ಮೇ 27 ರಂದು ಕೇರಳಕ್ಕೆ ಅಪ್ಪಳಿಸಲಿದೆ. ನಂತರ ಮೂರು ದಿನಗಳ ಬಳಿಕ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದೆ.

ಭಾರತೀಯ ಹವಾಮಾನ ಇಲಾಖೆ, ತನ್ನ ಮುನ್ಸೂಚನೆಯಲ್ಲಿ, ಭಾರತೀಯ ಮಾನ್ಸೂನ್ ಪ್ರದೇಶದಲ್ಲಿ, ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಆರಂಭಿಕ ಮಾನ್ಸೂನ್ ಮಳೆಯಾಗುತ್ತದೆ ಎಂದು ಹೇಳಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ನೈರುತ್ಯ ಮುಂಗಾರು ಪೂರ್ವ ಮಾನ್ಸೂನ್ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಿದೆ. ಸಭೆಯಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣಾ ಯೋಜನೆಗಳ ಸ್ಥಿತಿಯನ್ನು ಪರಿಶೀಲಿಸಲಾಯಿತು.

ಇಡೀ ವರ್ಷದಲ್ಲಿ ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರಗಳು ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಈ ವರ್ಷ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಮಾಹಿತಿ ನೀಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd