ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿ ಮಾನ್ಸೂನ್ ರಾಗ ….
ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಬಿಝಿ ನಾಯಕ ನಟರಾಗಿರುವ ಡಾಲಿ ಧನಂಜಯ್ ಅಭಿನಯದ ಮಾನ್ಸೂನ್ ರಾಗ ಚಲಚನಚಿತ್ರ ಇಂದು ತೆರೆ ಕಾಣುತ್ತಿದೆ. ಡಾಲಿಗೆ ಜೊತೆಯಾಗಿ ರಚಿತ ರಾಮ್ ಮತ್ತು ಯಶಾ ಶಿವಕುಮಾರ್ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರ ನೊಡಿ ಹೊರಬಂದ ಪ್ರೇಕ್ಷಕರು ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಆದರೆ ಸಿನಿಮಾ ತಂಡಬಗ್ಗೆ ಒಂದು ಬೇಸರವೂ ಉಂಟಾಗಿದೆ.
ಇದು ಮೂಲತಃ ತೆಲುಗು ಸಿನಿಮಾ ಆಗಿದದ್ದುಇದು ರೀಮೇಕ್ ಚಿತ್ರ ಎಂದು ನೆಟ್ಟಿಗರು ಹೇಳುತ್ತಿದ್ದಾರೆ ಈ ವಿಚಾರವನ್ನ ಸಿನಿಮಾತಂಡ ಮುಚ್ಚಿಟ್ಟಿದ್ದಕ್ಕೆ ಅಸಮಾಧಾನವನ್ನ ಹೊರಹಾಕ್ತಿದ್ದಾರೆ.. ಇದು ತೆಲುಗಿನ ಕೇರ್ ಆಫ್ ಕಂಚೆರಪಾಲೆಂ ಚಿತ್ರದ ರಿಮೇಕ್ ಎಂದು ಸಿನಿಮಾ ನೊಡಿಬಂದ ಪ್ರೇಕ್ಷಕರು ಹೇಳುತ್ತಿದ್ದಾರೆ. ಇದೊಂದು ವಿಚಾರ ಹೊರತು ಪಡಿಸಿ ಇದೊಂದು ಫೀಲ್ ಗುಡ್ ಸಿನಿಮಾ.. ಉತ್ತಮ ಕಂಟೆಟ್ ಸಿನಿಮಾ ಎಂದು ಹಲವರು ಹೊಗಳಿದ್ದಾರೆ.
ರವೀಂದ್ರನಾಥ್ ನಿರ್ದೇಶನದ ಸಿನಿಮಾ ಇದಾಗಿದ್ದು ರಚಿತಾ – ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ , ಸುಹಾಸಿನಿ , ಯಶಾ ಶಿವಕುಮಾರ್ ಸೇರಿದಂತೆ ಹಲವರ ತಾರಾಬಳಗವಿದೆ..