ದಿನೇ ದಿನೇ ದಕ್ಷಿಣ ಕನ್ನಡ ಭಾಗದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಲೇ ಇರುವ ಬೆನ್ನಲ್ಲೇ ಇಂದು ಮಂಗಳೂರಿನಲ್ಲಿ ೩೧೧ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಇಲಾಖೆ ಹೊರಗೆಡವಿದೆ. ಇನ್ನೂ ಇದೇ ಮೊದಲ ಬಾರಿಗೆ ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಸುದ್ದಿ ಕರಾವಳಿಗರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಕರಾವಳಿಯಲ್ಲಿ ದಿನೇ ದಿನೇ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರಲ್ಲಿ ಸೋಂಕು ತಗುಲಿದ್ದು, ILE ಮತ್ತು SARI ಪ್ರಕರಣಪಾಸಿಟಿವ್ ಕೇಸ್‌ಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಕೊರೊನಾ ಅಟ್ಟಹಾಸಕ್ಕೆ ಈಗಾಗಲೇ ದಕ್ಷಿಣ ಕನ್ನಡ ಭಾಗದ ಜನರು ತ್ತರಿಸಿಹೋಗಿದ್ದಾರೆ. ಇದರ ಬೆನ್ನಲ್ಲೇ ಸೋಂಕು ತಡೆಗಟ್ಟಲು ಜಿಲ್ಲಾಡಳಿತದ ವತಿಯಿಂದ ಮಂಗಳೂರು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ವಾಣಿಜ್ಯ ವಹಿವಾಟು ಸೇರಿದಂತೆ ಇತರೇ ಎಲ್ಲಾ ಚಟುವಟಿಕೆಗಳನ್ನ ಬಂದ್ ಮಾಡಲಾಗಿದೆ.
ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ
ಈಗಿನ ಕಾಲದಲ್ಲಿ ನ್ಯಾಯಾಧೀಶರು ಅಥವಾ ರಾಜಕೀಯ ನಾಯಕರು ಬಳಸುವ ಒಂದು ಸಣ್ಣ ಪದ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯುವಕರನ್ನು...








