ಸಿನಿರಸಿಕರಿಗೆ ಹಬ್ಬದ ಗಿಫ್ಟ್ – ಈ ವಾರ OTT ಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್

1 min read
Karnataka Full unlock saaksha tv

ಸಿನಿರಸಿಕರಿಗೆ ಹಬ್ಬದ ಗಿಫ್ಟ್ – ಈ ವಾರ OTT ಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್

ಅಕ್ಟೋಬರ್ 2021 ದಸರಾ ಸೀಸನ್ ಎಲ್ಲೆಡೆ ಹಬ್ಬದ ಗುಂಗಲ್ಲಿ ಜನ ಕುಟುಂಬದ ಜೊತೆಗೆ ಸಂಭ್ರಮಿಸುತ್ತಿದ್ದಾರೆ. ಈ ನಡುವೆ OTTಯಲ್ಲಿ ಸಿನಿಮಾ ಜಾತ್ರೆ ಆರಂಭವಾಗ್ತಿದ್ದು, ಹಬ್ಬದ ಖುಷಿಯನ್ನ ಹೆಚ್ಚಿಸಿದೆ. ಮತ್ತೊಂದೆಡೆ ಹಬ್ಬದ ರಜೆಯಲ್ಲಿ ಫ್ಯಾಮಿಲಿ ಜೊತೆಗೆ ಥಿಯೇಟರ್ ಗಳಿಗೆ ಹೋಗಿಯೂ ಹೊಸ ಹೊಸ ಸಿನಿಮಾಗಳನ್ನ ನೋಡಬಹುದು. 100 % ಸೀಟಿಂಗ್ ಗೆ ಅನುಮತಿ ಸಿಕ್ಕಿದ್ದು, ಹೊಸ ಹೊಸ ಸಿನಿಮಾಗ:ಳು ತೆರೆ ಕಾಣ್ತಿವೆ.

OTT ಮತ್ತು ಥಿಯೇಟರ್ ಗಳಲ್ಲಿ ರಿಲೀಸ್ ಆಗ್ತಿರುವ ಮತ್ತು ಈಗಾಗಲೇ ಈ ತಿಂಗಳಲ್ಲಿ ರಿಲೀಸ್ ಆಗಿರುವ ಸಾಲು ಸಾಲು ಸಿನಿಮಾಗಳ ಲಿಸ್ಟ್ ಇಲ್ಲಿದೆ. ನೆಟ್ ಫ್ಲಿಕ್ಸ್ , ಅಮೇಜಾನ್ ಪ್ರೈಮ್ , ಡಿಸ್ನಿ ಹಾಟ್ ಸ್ಟಾರ್ , ಝೀ 5 , ಸೋನಿ ಲೈವ್ , MX ಪ್ಲೇಯರ್ ಮತ್ತಿತರ OTT ಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗ್ತಿವೆ. ಅಂದ್ಹಾಗೆ ಥಿಯೆಟರ್ ನಲ್ಲಿ ಈಗಾಗಲೇ ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ಧೂಳೆಬ್ಬಿಸುತ್ತಿದೆ.

ಬಾಲಿವುಡ್​​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ‘ಸರ್ದಾರ್​ ಉಧಮ್​’ ಕೂಡ ಇದೇ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್​ 16ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಕಾಣಸಿಗಲಿದೆ. 1919ಕ್ಕೆ ಲಂಡನ್​ನಲ್ಲಿ ಮೈಕಲ್​​ ಒಡಾಯರ್​ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೆಸರವಾಸಿಯಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಉದಮ್​ ಸಿಂಗ್​ ಜೀವನಾಧಾರಿತ ಸಿನಿಮಾ ಇದಾಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕಥಾಹಂದರ ಹೊಂದಿದ್ದು, ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಮೆಜಾನ್ ನಲ್ಲಿ

ತಮಿಳಿನ ಉದನ್ಫಿರಾಪ್ಪೆ ( ಅಕ್ಟೋಬರ್ 14) ಸಿನಿಮಾ ರಿಲೀಸ್ ಆಗಿದೆ. ನಾಳೆ ( ಅಕ್ಟೋಬರ್  15 ) ಫ್ರೆಂಡ್ ಶಿಪ್ ಸಿನಿಮಾ ರಿಲೀಸ್ ಆಗಲಿದೆ. ಇನ್ನೂ ಇದೇ ರೀತಿ 20 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗ್ತಿದ್ದು, ಸಿನಿರಸಿಕರ ಹಬ್ಬದ ಖುಷಿ ಡಬಲ್ ಮಾಡಿದೆ.

ಅಖಿಲ್ ಕಾಟ್ಯಾಲ್ ಬರೆದಿರುವ ಶಾರುಖ್ ಮೇಲಿನ ಪದ್ಯ ವೈರಲ್…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd