SSLC ಪರೀಕ್ಷೆ – ಮೊದಲ ದಿನವೇ 20,994 ವಿದ್ಯಾರ್ಥಿಗಳು ಗೈರು
ರಾಜ್ಯಾದ್ಯಂತ ನಿನ್ನೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ 20,994 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಸುಮಾರು 8,69,399 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 8,48,405 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನಿನ್ನೆ ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ಇನ್ನು ಪರೀಕ್ಷಾ ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ.
ಕಳೆದ ವರ್ಷ ಪರೀಕ್ಷೆಗೆ ಕೇವಲ 3,769 ವಿದ್ಯಾರ್ಥಿಗಳು ಗೈರಾಗಿದ್ದರೆ, ಈ ಬಾರಿ ಬರೋಬ್ಬರಿ 20,994 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದಕ್ಕೆ ಹಿಜಾಬ್ ವಿವಾದ ಕಾರವಾಯ್ತಾ ? ಅಥವಾ ಬೇರೆ ಏನು ಕಾರಣ ಎಂಬುದನ್ನ ಶಿಕ್ಷಣ ಇಲಾಖೆ ಪತ್ತೆ ಮಾಡಬೇಕಿದೆ.
ಕೋವಿಡ್ ನಂತರ ಇದೇ ಮೊದಲ ಬಾರಿಗೆ ಸಾಧಾರಣ ರೀತಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದೆ. 8ನೇ ಹಾಗೂ 9ನೇ ತರಗತಿ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ಅಟೆಂಡ್ ಆಗಿ ಪಾಸ್ ಆಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೈಹಿಕವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ.
MORE THAN 20 THOUSAND STUDENTS ABSENT ON THE FIRST DAY OF SSLC EXAMINATION IN KARNATAKA