ವಿಜಯನಗರ : ಲಾರಿಯೊಂದು ಕುರಿ ಮಂದೆಯ ಮೇಲೆ ಹರಿದ ಪರಿಣಾಮ 40ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿಯ (Kudligi) ಶಿವಪುರ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಶಿವಪುರದ ಬಾಲಪ್ಪ ಎಂಬ ರೈತನಿಗೆ ಸೇರಿದ್ದ ಕುರಿಗಳ ಮೇಲೆಯೇ ಲಾರಿ ಹರಿದಿದೆ. ಲಾರಿಯು ಹೊಸಪೇಟೆ (Hosapete) ಯಿಂದ ಬೆಂಗಳೂರು (Bengaluru) ಕಡೆಗೆ ತೆರಳುತ್ತಿತ್ತು. ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಯ ತುಂಬೆಲ್ಲಾ ಕುರಿಗಳು ಛಿದ್ರವಾಗಿ ಬಿದ್ದಿವೆ.
ರ್ಯಾಶ್ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಲಾರಿ ನಿಲ್ಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಲಾರಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯ ಪಕ್ಕದ ಕಬ್ಬಿಣದ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








