ಬಳ್ಳಾರಿ : ಮೂವತ್ತಕ್ಕೂ ಹೆಚ್ಚು ಜನರ ಮೇಲೆ ಜೇನು ಹುಳಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಾ ಕಚೇರಿ ಆವರಣದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ತಾಲೂಕಾ ಕಚೇರಿಯ ಆವರಣದಲ್ಲಿ ಜೇನು ಹುಳು ಗೂಡು ಕಟ್ಟಿಕೊಂಡಿತ್ತು. ಸಾರ್ವಜನಿಕರು ಸೇವೆ ಬಯಸಿ ನೂರಾರು ಜನ ತಾಲೂಕು ಆಫೀಸಿನಲ್ಲಿ ಜಮಾವಣೆಗೊಂಡಿದ್ದರು. ಸರ್ಕಾರ ಲಭ್ಯಗಳನ್ನು ಪಡೆಯಲು ಬಂದಿದ್ದ ಜನರ ಮೇಲೆ ಏಕಾಏಕಿಯಾಗಿ ಜೇನು ಹುಳುಗಳು ದಾಳಿ ನಡೆಸಿವೆ. ಇದರಿಂದಾಗಿ ಜನ ಕಕ್ಕಾಬಿಕ್ಕಿಯಾಗಿ ಓಡಿದರು. ಈ ಸಮಯದಲ್ಲಿ ಜೇನು ಹುಳು ದಾಳಿಗೆ ಮೂವತ್ತಕ್ಕೂ ಹೆಚ್ಚು ಜನಕ್ಕೆ ಗಾಯವಾಗಿದೆ. ಆರು ಜನರಿಗೆ ತೀವ್ರ ಗಾಯವಾಗಿದೆ. ಜೇನು ದಾಳಿಯಾಗಿ ಜನ ನರಳುತ್ತಿದ್ದರೂ ಸ್ಥಳಕ್ಕೆ ಅಂಬುಲೆನ್ಸ್ ಬರುವುದು ತಡವಾಗಿದೆ. ಕೂಗಳತೆ ದೂರದಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಕರೆಸದೆ ಬೇಜವಬ್ದಾರಿ ಮೆರೆದ ಅಧಿಕಾರಿಗಳು ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೇನುಗೂಡಿನಿಂದ ಅಪಾಯದ ಅರಿವಿದ್ದರೂ ಜೇನುಗೂಡು ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಏನಾದರು ಆಗಿದ್ದರೆ ಯಾರು ಗತಿ ಎಂದು ಅಧಿಕಾರಿಗಳ ಮೇಲೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








