Mosquito Bite: ಒಂದೇ ಸೊಳ್ಳೆ ಕಚ್ಚುವಿಕೆಯಿಂದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಎರಡೂ ಬರಬಹುದು – ವೈದ್ಯರ ಎಚ್ಚರಿಕೆ…
ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಜ್ವರದಿಂದ ಜನರು ತತ್ತರಿಸುತ್ತಿದ್ದಾರೆ. ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಜ್ವರಗಳು ಹರಡುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆ (ಪಿಜಿಐಎಂಇಆರ್) ವೈರಾಲಜಿ ವಿಭಾಗದ ವೈದ್ಯರು ತಿಳಿಸಿದ್ದಾರೆ.
ಚಂಡೀಗಢದಲ್ಲಿ ಈಗಾಗಲೇ 101 ಚಿಕೂನ್ ಗುನ್ಯಾ ಮತ್ತು 839 ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ವೈರಾಲಜಿ ವಿಭಾಗದ ಮುಖ್ಯಸ್ಥ ರಾಧಾ ಕಾಂತ ರಾಠೋ ಮಾತನಾಡಿ, ಈ ಋತುವಿನಲ್ಲಿ ಈಡಿಸ್ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಜ್ವರಗಳ ಬರುತ್ತವೆ ಎಂದು ತಿಳಿಸಿದ್ದಾರೆ.
ಒಂದು ಸೊಳ್ಳೆ ಕಡಿತದಿಂದ ಎರಡು ರೀತಿಯ ಜ್ವರಗಳು ಹರಡುತ್ತವೆ ಎಂದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಈಡಿಸ್ ಸೊಳ್ಳೆ ಹಗಲಿನಲ್ಲಿ ಹೆಚ್ಚು ಅಪಾಯಕಾರಿ ಮತ್ತು ಈ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ವೈರಾಣು ಸೋಂಕುಗಳಿಂದಾಗಿ ತೀವ್ರತರವಾದ ಜ್ವರ, ತಲೆನೋವು, ವಾಕರಿಕೆ, ದದ್ದು, ಗಂಟಲು ನೋವು ಮುಂತಾದ ಲಕ್ಷಣಗಳು ಕಾಣಿಸಿಕೊಂಡು ಕೆಲವೊಮ್ಮೆ ಪ್ರಾಣಾಪಾಯವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
Mosquito Bite: Both Dengue and Chikungunya can be contracted from a single mosquito bite – Doctors warn…