ಚುಟುಕು ಕ್ರಿಕೆಟ್ ನಲ್ಲಿ ವಿಕೆಟ್ ಗಳ ಲೆಕ್ಕಕ್ಕಿಂತ ಸಿಕ್ರ‍್ಗಳ ಲೆಕ್ಕ ಇಡುವುದೇ ಹೆಚ್ಚು. ಸಿಕ್ಸರ್ ಸಿಡಿಸುವ ಆಟಗಾರನಿಗೆ ಎಲ್ಲಿಲ್ಲದ ಡಿಮ್ಯಾಂಡ್. ಪಂದ್ಯವನ್ನು ಬದಲಿಸಬಲ್ಲ ಆಟಗಾರ ಕೂಡ ಸಿಕ್ಸರ್ ಕಿಂಗ್ಸ್ ಆಗಿ ಬಿಡುತ್ತಾನೆ. 6 ಆವೃತ್ತಿಗಳನ್ನು ಕಂಡಿರುವ ಟಿ20 ವಿಶ್ವಕಪ್ ನಲ್ಲಿ ಒಟ್ಟಾಗಿ ಸಾವಿರಾರು ಸಿಕ್ಸರ್ ಗಳು ಸಿಡಿದಿವೆ. ಪ್ರತಿಯೊಂದು ಆವೃತ್ತಿಯಲ್ಲೂ ಒಬ್ಬೊಬ್ಬ ಸಿಕ್ಸರ್ ಕಿಂಗ್ ಹುಟ್ಟಿಕೊಂಡಿದ್ದಾನೆ. ಸಿಕ್ಸರ್ ಕಿಂಗ್ ಗಳ ಪಟ್ಟಿಯಲ್ಲಿ ಕೆಲವೊಂದು ಅಚ್ಚರಿಯ ಹೆಸರುಗಳು ಕೂಡ ಸೇರಿಕೊಂಡಿವೆ.
ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ ಹಲವು ಸಿಕ್ಸರ್ ಕಿಂಗ್ ಗಳಿದ್ದರು. ಆದರೆ ಟರ‍್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ನ್ಯೂಜಿಲೆಂಡ್ ನ ಕ್ರೆಗ್ ಮೆಕ್ ಮಿಲನ್ ಪಾಲಾಗಿತ್ತು. ಮೆಕ್ ಮಿಲನ್ 5 ಪಂದ್ಯಗಳಿಂದ 13 ಸಿಕ್ಸರ್ ಸಿಡಿಸಿದ್ದರು. ಭಾರತದ ಯುವರಾಜ್ ಸಿಂಗ್ 12 ಸಿಕ್ಸರ್ ಸಿಡಿಸಿ 2ನೇ ಸ್ಥಾನ ಪಡೆದುಕೊಂಡಿದ್ದರು.
2009ರಲ್ಲಿ 2ನೇ ಆವೃತ್ತಿಯ ಟಿ20 ವಿಶ್ವಕಪ್ ನಡೆದಿತ್ತು. ಆದರೆ ಈ ಬಾರಿ ಯುವರಾಜ್ ಸಿಕ್ಸರ್ ಕಿಂಗ್ ಪಟ್ಟವನ್ನು ಪಡೆದುಕೊಂಡರು. ಯುವಿ 5 ಇನ್ನಿಂಗ್ಸ್ ಗಳಲ್ಲಿ 9 ಸಿಕ್ಸರ್ ಸಿಡಿಸಿದ್ದು ಟರ‍್ನಿಯಲ್ಲಿ ಆಟಗಾರನೊಬ್ಬ ಬಾರಿಸಿದ ಅತೀ ಹೆಚ್ಚಿನ ಸಿಕ್ಸರ್ ಆಗಿ ದಾಖಲಾಗಿತ್ತು.
2010ರಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ನಡೆಯಿತು. ವೆಸ್ಟ್ಇಂಡೀಸ್ ನಲ್ಲಿ ನಡೆದ ಟರ‍್ನಿಯಲ್ಲಿ ಆಸ್ಟ್ರೇಲಿಯಾದ ಕೆಮರೂನ್ ವೈಟ್ ಸಿಕ್ಸರ್ ಕಿಂಗ್ ಆಗಿದ್ದರು. ವೈಟ್ 7 ಪಂದ್ಯಗಳಿಂದ 12 ಸಿಕ್ಸರ್ ಸಿಡಿಸಿದ್ದರು.
2012ರಲ್ಲಿ ಶ್ರೀಲಂಕಾ ಟಿ20 ವಿಶ್ವಕಪ್ ಗೆ ಆತಿಥ್ಯ ನೀಡಿತ್ತು. ಇಲ್ಲಿ ಕೆರಿಬಿಯನ್ ದೈತ್ಯ ಯೂನಿರ‍್ಸಲ್ ಬಾಸ್ ಕ್ರಿಸ್ ಗೇಲ್ ಸಿಕ್ಸರ್ ಕಿಂಗ್ ಆಗಿ ಮೆರೆದಾಡಿದ್ದರು. ಗೇಲ್ 6 ಪಂದ್ಯಗಳಿಂದ 16 ಸಿಕ್ಸರ್ ಬಾರಿಸಿದ್ದರು.
2014ರಲ್ಲಿ ಬಾಂಗ್ಲಾ ಟಿ20 ವಿಶ್ವಕಪ್ ಗೆ ಆತಿಥ್ಯ ನೀಡಿತ್ತು. ಇಲ್ಲಿ ಅಚ್ಚರಿಯ ಸಿಕ್ಸರ್ ಕಿಂಗ್ ಹುಟ್ಟಿಕೊಂಡರು. ನೆರ‍್ಲೆಂಡ್ ನ ಸ್ಟೀಫನ್ ಮೈ ರ‍್ಗ್ 7 ಪಂದ್ಯಗಳಿಂದ 13 ಸಿಕ್ಸರ್ ಸಿಡಿಸಿ ಮಿಂಚಿದರು.
ಭಾರತ ಆತಿಥ್ಯ ನೀಡಿದ್ದ 2016ರ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದ ತಮೀಮ್ ಇಕ್ಬಾಲ್ ಸಿಕ್ಸರ್ ಕಿಂಗ್ ಆಗಿದ್ದರು. 6 ಪಂದ್ಯಗಳಿಂದ ತಮೀಮ್ 16 ಸಿಕ್ಸರ್ ಬಾರಿಸಿದ್ದರು. ಈಗ ಯುಎಇನಲ್ಲಿ ವಿಶ್ವಕಪ್ ಟರ‍್ನಿ ನಡೆಯುತ್ತಿದೆ. ಯಾರಾಗ್ತಾರೆ ಸಿಕ್ಸರ್ ಕಿಂಗ್ ಅನ್ನುವ ರ‍್ಚೆ ಶುರುವಾಗಿದೆ.