ಜಗತ್ತಿನ 14 ಅತಿ ವಿಚಿತ್ರ ಹಾಗೂ ಅಸಹ್ಯ ಆಹಾರಗಳು..!
ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್…!
ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್….!
ಇಡೀ ವಿಶ್ವಕ್ಕೆ ಗೊತ್ತಿದೆ ಭಾರತದಲ್ಲಿದೆ ಉತ್ತಮ ಆಹಾರ ಪದ್ಧತಿ..!
ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು..!
ಬದುಕೋಸ್ಕರ ತಿನ್ನಬೇಕು ಅಂತ ಹೇಳ್ತಾರೆ ಆದ್ರೆ ತಿನ್ನೋಕೋಸ್ಕರನೇ ಬದುಕೋದು ಅಂತ ಹೇಳೋರು ಹೆಚ್ಚು. ಅಂದ್ರೆ ಭಿನ್ನ, ವಿಭಿನ್ನ ಆಹಾರಗಳನ್ನ ತಿನ್ನಬೇಕು, ರುಚಿ ನೋಡಬೇಕು ಅನ್ನೋದು ಪ್ರತಿ ಮುನುಷ್ಯರ ಸಹಜ ಗುಣವಾಗಿರುತ್ತೆ. ಕೆಲವೊಮ್ಮೆ ಕೆಲ ಆಹಾರಗಳು ಇಷ್ಟವಾಗಲೂ ಆಹುದು ಆಗದೆಯೂ ಇರಬಹುದು. ಆದ್ರೆ ಒಂದು ಸಲ ಟ್ರೈ ಮಾಡ್ಬೇಕು ಅನ್ನಿಸುತ್ತೆ. ನಮ್ಮ ಮುಂದೆ ಬಗೆ ಬಗೆಯ ಒಂದಿಷ್ಟು ತರವೇಹಾರಿ ಆಹಾರಗಳನ್ನ ಇಟ್ಬೆಟ್ರಿ ಬಾಯಿ ಚಪ್ಪರಿಸುತ್ತಾ ತಿನ್ನೋದರ ಮಜಾನೆ ಬೇರೆ ಅಲ್ವಾ..
ಇನ್ನೂ ಕೆಲವೊಂದು ಆಹಾರ ಪದಾರ್ಥಗಳನ್ನ ನೆನಸಿಕೊಂಡ್ರೆ ಆಹಾ ಬಾಯಲ್ಲಿ ನೀರು ಬರುತ್ತೆ… ಆಹಾರಗಳಲ್ಲಿ ಕೋಟ್ಯಾನು ಕೋಟಿ ಬಗೆಗಳಿವೆ. ಅದು ನಾನ್ ವೆಜ್ ಆಗಿರಬಹುದು ವೆಜ್ ಆಗಿರಬಹುದು ಬಟ್ ಅಸಹ್ಯವಾಗಿರಬಹುದು. ನೋಡಿದ ತಕ್ಷಣ ತಿನ್ನಬೇಕು ಅಂತ ಅನ್ನಿಸಬೇಕು.. ಆದ್ರೆ ಪ್ರಪಂಚದಲ್ಲಿ ತುಂಬಾನೆ ವಿಚಿತ್ರ ಅಸಹ್ಯ ಎನಿಸುವಂತಹ ಆಹಾರಗಳಿವೆ. ಒಂದಂತೂ ನಿಜ ನಮ್ಮ ಭಾರತದ ಆಹಾರ ಪದ್ಧತಿಯೇ ಯಾವಾಗಲೂ ಬೆಸ್ಟ್…. ಆದ್ರೆ ಚೀನಾ ಮತ್ತು ಪ್ರಪಂದ ಇತರೇ ರಾಷ್ಟ್ರಗಳಲ್ಲಿನ ಆಹಾರ ಪದ್ಧತಿ ಅಸಹ್ಯ ಅನಿಸಬಹುದು. ಕೆಲವೊಂದು ಇಷ್ಟ ಆದರೂ ಆಗಬಹುದು.
1. ಕಾಶ್ – ( ಪೂರ್ವ ಯೂರೋಪ್, ಟರ್ಕಿ )
ಕಾಶ್… ಈ ಆಹಾರ ಟರ್ಕಿ ಹಾಗೂ ಪೂರ್ವ ಯೂರೋಪ್ ನಲ್ಲಿ ತಯಾರಿಸಲಾಗುತ್ತೆ. ಇದನ್ನ ಬೇಯಿಸಿದ ಹಸುಗಳ ಕಾಲು ಮತ್ತು ತಲೆಬುರುಡೆಯಿಂದ ತಯಾರಿಸಲಾಗುತ್ತೆ. ಇನ್ನೂ ಆ ತಲೆಬುರುಡೆಯಲ್ಲಿನ ಕಣ್ಣುಗಳನ್ನ ಗ್ರಾಹಕರನ್ನ ನೋಡುತ್ತಿರುವಂತೆ ಅದನ್ನ ಸೂಪ್ ಮೇಲಿಟ್ಟು ಕೊಡಲಾಗುತ್ತೆ.
2. ಸೊಮ್ನಿಯೋಸಿಡೆ – ಐಲ್ಯಾಂಡ್
ಸೊಮ್ನಿಯೋಸಿಡೆ. ಇದನ್ನ ಶಾರ್ಕ್ನ ಕೊಳೆಯುತ್ತಿರುವ ಶವದಿಂದ ಮಾಡಲಾಗುತ್ತೆ. ಕೇಳಲಿಕ್ಕೆ ಇಷ್ಟು ಅಸಹ್ಯವಾಗಿದ್ರೆ ಇದನ್ನ ಜನ ಹೇಗೆ ತಿನ್ನುತ್ತಾರೆ ಅನ್ಸುತ್ತೆ. ಆದ್ರೆ ಇದನ್ನ ಗ್ರೀನ್ ಲ್ಯಾಂಡ್ ನಲ್ಲಿ ಹೆಚ್ಚಾಗಿ ತಿನ್ನಲಾಗುತ್ತದೆ. ಪ್ರಪಂಚದ ವಿಚಿತ್ರ ಆಹಾರದಲ್ಲಿ ಇದು ಒಂದು ಶಾರ್ಕ್ ಅನ್ನ ಕೊಂದು ಹಳ್ಳದಲ್ಲಿ ಹೂತಿಡಲಾಗುತ್ತೆ. ಬಳಿಕ ಈ ಮಾಂಸವನ್ನು ಕತ್ತರಿಸಿ ಬಡಿಸುವುದಕ್ಕೂ ಮೊದಲು ನೇತುಹಾಕಲಾಗುತ್ತೆ. ಇದಾದ ಬಳಿಕ ಬಡಿಸಲಾಗುತ್ತದೆ.
3. ಸೆಂಚುರಿ ಎಗ್ ( 100 ವರ್ಷಗಳ ಹಳೆಯ ಮೊಟ್ಟೆ ) – ಚೈನಾ
ಸೆಂಚುರಿ ಎಗ್.. ಹಾಗಂತ ಈ ಮೊಟ್ಟೆಯೇನು 100 ವರ್ಷಳ ಹಿಂದೆ ಬೇಯಿಸಿಟ್ಟಿದ್ದಲ್ಲ. ಆದ್ರೆ ತಿಂಗಳಷ್ಟಂತೂ ಹಳೆಯದ್ದೇ.. ಹೇಳಿ ಕೇಳಿ ಚೈನಾ ಫುಡ್ ಅಂದ್ರೆ ನಮಗೆ ಅದು ಅಸಹ್ಯ ಅನ್ನಿಸದೇ ಇರೋದಿಲ್ಲ. ಅಂದ್ಹಾಗೆ ಮೊಟ್ಟೆ ಯಾರಿಗೆ ತಾನೆ ಇಷ್ಟ ಇರಲ್ಲ. ಹಾಗಂತ ಯಾರಾದ್ರೂ ಕೊಳೆತ ಮೊಟ್ಟೆ ತಿನ್ನೋದಕ್ಕೆ ಇಷ್ಟ ಪಡ್ತಾರಾ… ಆದ್ರೆ ಚೈನಾದಲ್ಲಿ ಕೊಳೆಸಿ ಕೊಳೆಸಿ ಮೊಟ್ಟೆ ಹಸಿರು ಬಣ್ಣಕ್ಕೆ ತಿರುಗಿದ ಮೇಲೆ ಅದನ್ನ ತಿನ್ನಲಾಗುತ್ತೆ. ಇದು ಅಸಹ್ಯ ಎನ್ನಿಸಿದ್ರು ನಿಜ. ಕೆಲವು ತಿಂಗಳುಗಳವರೆಗೆ ಜೇಡಿಮಣ್ಣು, ಬೂದಿ ಮತ್ತು ಕ್ವಿಕ್ಲೈಮ್ ಮಿಶ್ರಣದಲ್ಲಿ ಮೊಟ್ಟೆಯನ್ನ ಸಂರಕ್ಷಿಸಲ್ಪಟ್ಟ ನಂತರ, ಹಳದಿ ಲೋಳೆ ಕಡು ಹಸಿರು ಅಥವಾ ಕಪ್ಪು ಮತ್ತು ತೆಳ್ಳಗೆ ತಿರುಗುತ್ತದೆ, ಆದರೆ ಬಿಳಿ ಬಣ್ಣವು ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನ ಅಲ್ಲಿನ ಜನ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ.
4. ಶಿಯೋಕಾರಾ – ಜಪಾನ್
ಶಿಯೋಕಾರಾ… ಜಪಾನ್ ನಲ್ಲಿ ತಯಾರಿಸುವ ಈ ಖಾದ್ಯ ನಿಜಕ್ಕೂ ಅಸಹ್ಯ ಅನ್ನಿಸುತ್ತೆ. ಬಗೆ ಬಗೆಯ ಸಮುದ್ರ ಜೀವಿಗಳ ಮಾಂಸಗಳ ತುಂಡುಗಳಿಂದ ಈ ಖಾದ್ಯ ತಯಾರಾಗುತ್ತೆ. ನಿಜ ಹೇಳೋದಾದ್ರೆ ಇದನ್ನ ನೋಡಿದ್ರೂನೂ ವಾಕರಿಕೆ ಬರುತ್ತೆ. ಇನ್ನೂ ಇದನ್ನ ಹಸಿಯಾಗಿಯೇ ತಿನ್ನುತ್ತಾರೆ ಅಂದ್ರೆ ವ್ಯಾಕ್ ಅನ್ನಿಸುತ್ತೆ. ಅಸಹ್ಯ ಅನ್ನಿಸುತ್ತೆ. ಇನ್ನೂ ಈ ಮಿಶ್ರಣವನ್ನ ಹಸಿಯಾಗಿಯೇ ತಿನ್ನುತ್ತಾರೆ ಅಂದ್ರೆ…. ಹೌದು ಕೇಳೋದಕ್ಕೆ ಇಷ್ಟು ಅಸಹ್ಯ ಅನ್ನಿಸುತ್ತಿದೆ. ಆದ್ರೆ ಇದು ನಿಜ ಇದನ್ನ ಹಸಿಯಾಗಿಯೇ ಸೇವಿಸುತ್ತಾರೆ.
5. ಜಿಂಗ್ ಲೀಡ್ – ಥೈಲ್ಯಾಂಡ್
ಜಿಂಗ್ ಲೀಡ್ … ಥೈಲ್ಯಾಂಡ್ ನಲ್ಲಿ ತಯಾರಿಸುವ ಜಿಂಗ್ ಲೀಡ್ ಕುಂಟುಮಿಡತೆಗಳಿಂದ ಮಾಡಲಾಗುತ್ತೆ. ಸ್ಪಷ್ಟವಾಗಿ ಹೇಳೋದಾದ್ರೆ ಕುಂಟ ಮಿಡತೆಯ ಫ್ರೈ ಅನ್ನಬಹುದು. ಹೌದು ಕುಂಟು ಮಿಡತೆಗಳನ್ನ ಕೊಂದು ಅದಕ್ಕೆ ಮೆಣಸು, ಮೆಣಸಿನಕಾಯಿ ಮಸಾಲೆ ಹಾಕಿ ಹುರಿದು ಸರ್ವ್ ಮಾಡಲಾಗುತ್ತದೆ. ಇನ್ನಷ್ಟು ಪ್ರಪಂಚದ ಹೊಲಸು , ವಿಚಿತ್ರವಾದ ಆಹಾರಗಳು, ಹೇಗೆ ಯಾವ ದೇಶದಲ್ಲಿ ಮಾಡ್ತಾರೆ ಅನ್ನೋದನ್ನ ಮುಂದಿನ ಭಾಗದಲ್ಲಿ ( PART-2) ನಲ್ಲಿ ತಿಳಿಯೋಣ..
6. ವಾಸ್ಪ್ ಕ್ರಾಕರ್ಸ್ (ಹುಳುಗಳ ಬಿಸ್ಕ್ಯೂಟ್ ) – ಜಪಾನ್
ಬಿಸ್ಕ್ಯೂಟ್, ಕುಕ್ಕೀಸ್ ಸ್ವೀಸ್ ಆಗಿರುತ್ತೆ. ಕೆಲವೊಂದು ಸಾಲ್ಟ್ ಆಗಿ ಇರಬಹುದು ಇದನ್ನ ಹಿರಿಹರು, ಯುವಕರು, ವಯಸ್ಕರು ಮಕ್ಕಳು ಎಲ್ಲರೂ ಇಷ್ಟ ಪಡ್ತಾರೆ ಆದ್ರೆ ಜಪಾನ್ ನಲ್ಲಿ ತಯಾರಿಸಲಾಗುವ ವಾಸ್ಪ್ ಕ್ರಾಕರ್ಸ್ ಆ ದೇಶದ ಸಿಕ್ಕಾಪಟ್ಟೆ ಫೀಮಸ್ ಸ್ನಾಕ್. ಅದು ಪ್ರಪಂಚದ ಅತಿ ವಿಚಿತ್ರ ಆಹಾರದಲ್ಲಿಯೂ ಒಂದು. ಯಪ್ಪಾ… ನಾವು ಊಟದಲ್ಲಿ ಸಸಣ್ಣ ಕೂದಲು, ಸಣ್ಣ ಹುಳ ಸಿಕ್ರೇನೆ ಅರ್ಧಕ್ಕೆ ಎದ್ಬಿಡ್ತೀವೆ. ಆದ್ರೆ ಇವರು ಹುಳಗಳದ್ದೇ ಬಿಸ್ಕ್ಯೂಟ್ ತಿನ್ನೋದು ನೋಡುದ್ರೆ ಯಾರಿಗೆ ತಾನೆ ಅಸಹ್ಯ ಆಗಲ್ಲ. ಅದ್ರಲ್ಲೂ ಭಾರತೀಯರಿಗೆ ನೋಡಿದ ತಕ್ಷಣ ವ್ಯಾಕ್ ಅನ್ನಿಸಿಬಿಡುತ್ತೆ.
7. ಫ್ರೈಡ್ ಸ್ಪೈಡರ್ ( ಫ್ರೈ ಮಾಡಲಾದ ಜೇಡ ) – ಕಾಂಬೋಡಿಯಾ
ಫ್ರೈ ಮಾಡಲಾದ ಸ್ಫಡರ್ ಡಿಶ್ ಕಾಂಬೊಡಿಯಾದಲ್ಲಿ ತುಂಬಾನೆ ಫೇಮಸ್. ಜೇಡದ ಹುಳವನ್ನ ಸಾಯಿಸಿ ಅದನ್ನ ಸಕ್ಕರೆ ಉಪ್ಪಿನಲ್ಲಿ ನೆನೆಸಿ ಬೆಳ್ಳುಳ್ಳಿ ಜೊತೆಗೆ ಫ್ರೈ ಮಾಡಿ ಕೊಡಲಾಗುತ್ತೆ.
8. ವಿಚೇಟಿ ಗ್ರಬ್ : ಆಸ್ಟ್ರೇಲಿಯಾ
ಇದನ್ನ ನೋಡೋದಕ್ಕೆ ಇಷ್ಟು ಅಸಹ್ಯ ಎನ್ನಿಸುತ್ತೆ. ತಿನ್ನಲಿಕ್ವಕೆ ಅದ್ಹೇಗೆ ಮನಸ್ಸು ಬರುತ್ತೆ ಅಂತ ಅನ್ಸಿದ್ರೂ ಅಲ್ಲಿನ ಜನ ಇದನ್ನ ಬಾಯಿ ಚಪ್ಪರಿಸಿಕೊಂಡು ತಿನ್ನೋದು ನಿಜ. ಈ ಹುಳುವನ್ನ ಡೆಸರ್ಟ್ ರುಪದಲ್ಲಿ ಸೇವನೆ ಮಾಡಲಾಗುತ್ತೆ. ಇನ್ನೂ ಅಸಹ್ಯ ಏನ್ ಗೊತ್ತಾ… ಹಸಿಯಾಗಿಯೂ ಈ ಹುಳುವನ್ನ ಅಲ್ಲಿನ ಜನ ಹಾಗೇ ತಿಂತಾರಂತೆ.
9. ಬಿಯೋನ್ ಡೇಗಿ – ಸೌತ್ ಕೊರಿಯಾ
ನಮ್ಮಲ್ಲಿ ರೇಷ್ಮೆ ಹುಳುಗಳನ್ನ ರೇಷ್ಮೆ ಸೀರೆ ತಯಾರಿಸಲು ಬಳಸುತ್ತೇವೆ ಅಲ್ವಾ.. ಆದ್ರೆ ಸೌತ್ ಕೊರಿಯಾದಲ್ಲಿ ಆ ಹುಳುಗಳನ್ನ ಡಿಶ್ ಮಾಡಿ ಸರ್ವ್ ಮಾಡಲಾಗುತ್ತೆ. ಅಲ್ಲದೇ ಇದು ತುಂಬಾನೆ ಫೇಮಸ್ ಅಂತೆ. ಸರಳವಾಗಿ ಬೇಯಿಸಿದ ಅಥವಾ ಆವಿಯಲ್ಲಿ ಮತ್ತು ಲಘುವಾಗಿ ಮಸಾಲೆ ಹಾಕಿದ ಇದು ಕೊರಿಯಾದಾದ್ಯಂತ ಜನಪ್ರಿಯ ತಿಂಡಿ ಮತ್ತು ಸಾಮಾನ್ಯವಾಗಿ ಬೀದಿ ಬದಿ ವ್ಯಾಪಾರಿಗಳಿಂದ ಮಾರಾಟವಾಗುತ್ತದೆ.
10. ಸ್ನೇಲ್ ಡಿಶ್ ( ಬಸವಣ್ಣನ ಹುಳದ ಖಾದ್ಯ ) – ಫ್ರಾನ್ಸ್
ಸಾಮಾನ್ಯವಾಗಿ ಬಸವಣ್ಣನ ಹುಳುಗಳು ಅಂಟಂಟಾಗಿರೋದಕ್ಕೆ ಯಾರಿಗೂ ಅವನ್ನಮುಟ್ಟಲೂ ಸಹ ಇಷ್ಟ ಆಗೋದಿಲ್ಲ. ಆದ್ರೆ ಫ್ರನ್ಸ್ ನಲ್ಲಿ ಇದಕ್ಕೆ ಸ್ಪೆಷಿಯಲ್ ರೆಸಿಪಿನೆ ಇದೆ. ವೈಟ್ ವೈನ್ , ಬೆಳ್ಳುಳ್ಳಿ, ಬೆಣ್ಣೆ ಮತ್ತು ಪಾರ್ಸ್ಲಿ ಸಾಸ್ನಲ್ಲಿ ಬೇಯಿಸಿದ ಬಸವನವು ಅವುಗಳ ಚಿಪ್ಪುಗಳಲ್ಲಿ ಬಡಿಸಲಾಗುತ್ತದೆ.
11. ಮೊಪಾನೆ ವಾರ್ಮ್ – ಸೌತ್ ಆಫ್ರಿಕಾ
ಹುಳುಗಳ ಮಾಂಸದಿಂದ ತುಂಬಿದ ಸಾಂಪ್ರದಾಯಿಕವಾಗಿ ಒಣಗಿದ ಅಥವಾ ಹೊಗೆಯಾಡಿಸಿದರೂ, ಅವುಗಳನ್ನು ಸಾಮಾನ್ಯವಾಗಿ ಪುನಃ ಹೈಡ್ರೀಕರಿಸಲಾಗುತ್ತದೆ ಮತ್ತು ಟೊಮೆಟೊ ಅಥವಾ ಮೆಣಸಿನಕಾಯಿ ಸಾಸ್ನೊಂದಿಗೆ ರುಚಿಗೆ ತಕ್ಕಂತೆ ಬೇಯಿಸಲಾಗುತ್ತದೆ.
12. ಪಿಕಲ್ಡ್ ಎಗ್ (ಮೊಟ್ಟೆ ಉಪ್ಪಿನಕಾಯಿ ) – ಯುಕೆ
ಪಿಕಲ್ಡ್ ಎಗ್ ಅಂದ್ರೆ ಮೊಟ್ಟೆ ಉಪ್ಪಿನಕಾಯಿ. ಇದು ಗಟ್ಟಿಯಾದ ಬೇಯಿಸಿದ ಮೊಟ್ಟೆಯಾಗಿದ್ದು, ತಣ್ಣಗಾದ ನಂತರ ವಿನೆಗರ್ ನಲ್ಲಿ ನೆನಯಿಟ್ಟು ಹುಳಿ ಸರಿಯಾಗಿ ಹಿಡಿದ ನಂತರ ಅದನ್ನ ತಿನ್ನಲಾಗುತ್ತೆ. 8. ಬರ್ಡ್ ನೆಸ್ಟ್ ಸೂಪರ್ ( ಪಕ್ಷಿಗಳ ಗೂಡಿನ ಸೂಪ್ ) – ಸೌತ್ ಆಫ್ರಿಕಾ ಸ್ವಿಫ್ಲೆಟ್ ಪಕ್ಷಿ ಗೂಡಿನಲ್ಲಿ ಸೂಪ್ ತಯಾರಿಸ ಅದನ್ನ ಸವಿಯಲಾಗುತ್ತೆ. ಸ್ವಿಫ್ಲೆಟ್ ಹಕ್ಕಿ, ತನ್ನ ಹಾಸಿಗೆಗಾಗಿ ಕೊಂಬೆಗಳನ್ನು ಸಂಗ್ರಹಿಸುವ ಬದಲು, ಅದನ್ನು ತನ್ನದೇ ಆದ ಅಂಟಂಟಾದ ಲಾಲಾರಸದಿಂದ ನಿರ್ಮಿಸುತ್ತದೆ. ಅದೇ ಲಾಲಾರಸದಿಂದ ಕೂಡಿರುವ ಗೂಡನ್ನ ತಂದು ಅದರಿಂದ ಸೂಪ್ ತಯಾರಿಸಲಾಗುತ್ತದೆ.
13. ಸ್ಟೀಕ್ ಟರ್ಟೇರ್ – ಫ್ರಾನ್ಸ್
ಈ ಡಿಶ್ ಅನ್ನ ಬೀಫ್ ಅಂದ್ರೆ ಹಸುವಿನ ಮಾಂಸದಿಂದ ಸ್ಟೀಕ್ ತಯಾರಿಸಿ ಉಣಬಡಿಸಲಾಗುತ್ತೆ. ಆದ್ರೆ ಇದನ್ನ ಹಸಿಯಾಗಿಯೇ ಸರ್ವ್ ಮಾಡಲಾಗುತ್ತೆ. ಹೌದು ಹಸಿ ಮಾಂಸವನ್ನೇ ಬಡಿಸಿ , ಜೊತೆಗೆ ಹಸಿ ಮೊಟ್ಟೆ ಹಾಗೂ ಫ್ರೈಸ್ ಕಾಂಬಿನೇಷನ್ ಕೊಡಲಾಗುತ್ತೆ. ಕಚ್ಚಾ ನೆಲದ ಗೋಮಾಂಸದಿಂದ ಮಾಡಲ್ಪಮಾಂಸದ ಜೊತೆಗೆ ಈರುಳ್ಳಿ, ಕೇಪರ್ಗಳು, ಕಚ್ಚಾ ಮೊಟ್ಟೆಯೊಂದಿಗೆ ಬಡಿಸಲಾಗುತ್ತದೆ.
14. ಕೋಬ್ರಾ ಹಾರ್ಟ್ – ವೇಟ್ನಮ್
ಕೋಬ್ರಾ ಹಾರ್ಟ್… ಈ ಡಿಶ್ ನ ಹೇಗೆ ಮಾಡ್ತಾರೆ ಅಂತ ಗೊತ್ತಾದ್ರೆ ಅಸಹ್ಯ ಆಗೋದು ಬೇರೆ ವಿಚಾರ ಕೋಪ ನೆತ್ತಿಗೇರುತ್ತೆ. ಯಾಕಂದ್ರೆ ಗ್ರಾಹರ ಮುಂದೆಯೇ ಹಾವಿನ ಎದೆ ಸೀಳಿ ಅದು ನರಳಾಡುತ್ತಿರುವಾಗಲೇ ಅದರ ಹೃದಯ ಭಾಗವನ್ನ ಕಿತ್ತು ಅದೇ ಹಾವಿನ ರಕ್ತ ತುಂಬಿರುವ ಗ್ಲಾಸ್ ಅದನ್ನ ಹಾಕಿ ವಿಕೃತಿ ಮೆರೆದ ಬಳಿಕ ಅದನ್ನ ಕುಡಿಯಲಾಗುತ್ತೆ. ಕೋಬ್ರಾ ರಕ್ತವನ್ನ ಸೇವಿಸುವುದು ವಿಕೃತಿ ಅಲ್ದೇ ಇನ್ನೇನು.