ಅಪ್ಪನಿಗೆ ಮುದ್ದು ಮಗಳು ಅಂತ ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ..!
ಬೆಂಗಳೂರು : ಪಾಪಿ ತಾಯಿಯೊಬ್ಬಳು ತಾನು ಹೆತ್ತ 3 ವರ್ಷದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ. ಮಗು ತನಗಿಂತ ಹೆಚ್ಚಾಗಿ ತಂದೆಯನ್ನೇ ಪ್ರೀತಿಸುತ್ತಿತ್ತು ಎನ್ನುವ ಕ್ಷುಲ್ಲಕ ಕಾರಣಕ್ಕೆ ಮಗುವನ್ನ ಕೊಂದು ಹಾಕಿದ್ದಾಳೆ. ಈ ಸಂಬಂಧ ಮಗುವಿನ ತಂದೆಯ ದೂರನ್ನ ಆಧರಿಸಿ ಪೊಲೀಸರು ಆರೋಪಿ ತಾಯಿಯನ್ನ ಅರೆಸ್ಟ್ ಮಾಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲತ್ತಹಳ್ಳಿ ನಿವಾಸಿ ಸುಧಾ (35) ಬಂಧಿತ ಆರೋಪಿಯಾಗಿದ್ದಾಳೆ.
ಪ್ರಕರಣ ಹಿನ್ನೆಲೆ
ಆರೋಪಿ ಸುಧಾ ಹಾಗೂ ಪತಿ ವೀರಣ್ಣ ನಡುವೆ ಮನೆಯಲ್ಲಿ ಸದಾ ಗಲಾಟೆಗಳು ನಡೆಯುತ್ತಿದ್ದವು. ಅದ್ರಂತೆ ನಿನ್ನೆ ಸಂಜೆಯೂ ಜಗಳವಾಗಿದೆ. ಆದ್ರೆ ಆಗ ಮಗಳು ತಂದೆಯ ಪರ ಮಾತನಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದಿರುವ ಮಹಿಳೆ ಮಗುವನ್ನ ಹೊರಗೆ ಕರೆದೊಯ್ದು , ಆಕೆಯ ಕುತ್ತಿಗೆಯನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿ ದೀಪಾ ಕಾಂಪ್ಲೆಕ್ಸ್ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದ ಬಳಿ ಶವ ಎಸೆದು ಮನೆಗೆ ಬಂದಿದ್ದಾಳೆ.
ಇತ್ತ ಮಗು ಕಾಣೆಯಾಗ್ತಿದ್ದಂತೆ ಗಾಬರಿಗೊಂಡಿದ್ದ ತಂದೆ ಎಷ್ಟೇ ಕೇಳಿದ್ರು ಈ ಬಗ್ಗೆ ಸುದಾ ಉತ್ತರಿಸಿಲ್ಲ. ಇದ್ರಿಂದ ಸಿಟ್ಟಾಗಿ ವೀರಣ್ಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಜ್ಞಾನಭಾರತಿ ಠಾಣೆ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಮಗುವಿನ ಶವ ಇಟ್ಟಿರುವ ಜಾಗ ತಿಳಿದು ಮೇತದೇಹ ಪತ್ತೆ ಹಚ್ಚಿ ಮರನೋತ್ತರ ಪರೀಕ್ಷೆ ರವಾನಿಸಿದ್ದಾರೆ.