ಇನಿಯನ ಜೊತೆ ಸೇರಿ ಹೆತ್ತ ಮಗನನ್ನೇ ಕೊಂದು ನದಿಗೆ ಎಸೆದ ಪಾಪಿ ತಾಯಿ..!
ಮಹಿಳೆಯೊಬ್ಬಳು ತನ್ನ ಸ್ವಂತ ಮಗನನ್ನೇ ಕೊಂದು ನದಿಗೆ ಎಸೆದಿದ್ದಾಳೆ. 6 ವರ್ಷದ ಜೇಮ್ಸ್ ಹಚಿನ್ಸನ್ ಮೃತ ದುರ್ದೈವಿಯಾಗಿದ್ದಾನೆ. 29 ವರ್ಷದ ಗೋಸ್ನೆ ಹೆತ್ತ ಮಗುವನ್ನೇ ಕೊಂದ ಪಾಪಿಯಾಗಿದ್ದಾಳೆ. ಈಕೆ ಜೇಮ್ಸ್ ಹ್ಯಾಮಿಲ್ಟನ್ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈಕೆಗೆ ಮೂವರು ಮಕ್ಕಳಿದ್ದು, ಅದ್ರಲ್ಲಿ ಒಬ್ಬನ್ನನ್ನ ಕೊಂದು ಹಾಕಿದ್ದಾಳೆ.
ಇನ್ನೂ ಮಗನನ್ನು ಕೊಲೆ ಮಾಡುವುದಕ್ಕೆ ಈಕೆಯ ಬಾಯ್ ಫ್ರೆಂಡ್ ಒತ್ತಾಯ ಮಾಡುತ್ತಲೇ ಇದ್ದ. ಹೀಗಾಗಿ ಹೆತ್ತ ಕಂದಮ್ಮನ ಉಸಿರನ್ನೇ ನಿಲ್ಲಿಸಿರೋದಾಗಿ ಹೇಳಿಕೊಂಡಿದ್ದಾಳೆ ಆರೋಪಿ ತಾಯಿ.
ATM ಮಷಿನ್ ಜೊತೆಗೆ ಖದೀಮರು ಎಸ್ಕೇಪ್..!
ಇತ್ತೀಚೆಗೆ ಪಾರ್ಕ್ ಒಂದಕ್ಕೆ ಮಕ್ಕಳನ್ನ ಕರೆದುಕೊಂಡು ಹೋಗಿದ್ದ ಈಕೆ ಅಲ್ಲಿ ಜೇಮ್ಸ್ ನನ್ನ ಬಿಟ್ಟು ಬರಲು ಪ್ರಯತ್ನಿಸಿದ್ದಾಳೆ. ಆದರೂ ಮಗು ಓಡಿ ಬಂದು ಕಾರನ್ನ ಹತ್ತು ಪ್ರಯತ್ನ ಮಾಡಿದೆ. ಈ ವೇಳೆ ಮಗುವನ್ನ ಅಟ್ಟಾಡಿಸಿಕೊಂಡು ಹೋಗಿರುವ ರಾಕ್ಷಸಿ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಆತನನ್ನ ಕೊಲೆ ಮಾಡಿ ಬಳಿಕ ಮೃತದೇಹವನ್ನ ತೆಗೆದುಕೊಂಡು ನದಿಗೆ ಎಸಿದಿದ್ದಾಳೆ.
ಆಸ್ತಿ ವಿವಾದ : ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ
ಇದಾದ ಬಳಿಕ ಈ ಇಬ್ಬರೂ ಸೇರಿ ಮಗು ಕಳೆದುಹಹೋಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ವೇಳೆ ನಿಜಾಂಶ ಬಯಲಾಗಿದ್ದು, ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ ತಾಯಿಯ ಹೆಸರಿಗೆ ಈಕೆ ಕಳಂಕ ಎಂಬಂತೆ ನಡೆದುಕೊಂಡಿದ್ದಾಳೆ. ಇತ್ತ ಒಬ್ಬ ಮಗ ಪ್ರಾಣ ಕಳೆದುಕೊಂಡಿದ್ರೆ ಇನ್ನಿಬ್ಬರು ಮಕ್ಕಳು ಅನಾಥರಾಗಿದ್ದಾರೆ.