ATM ಮಷಿನ್ ಜೊತೆಗೆ ಖದೀಮರು ಎಸ್ಕೇಪ್..!

1 min read

ATM ಮಷಿನ್ ಜೊತೆಗೆ ಖದೀಮರು ಎಸ್ಕೇಪ್..!

ಚೆನ್ನೈ: ಖದೀಮರ ಗ್ಯಾಂಗ್ ಒಂದು ಎಟಿಎಂಗೆ ನುಗ್ಗಿ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹೌದು ನಾಲ್ವರ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಂ ಬೆಳಿಗ್ಗೆ ತಿರುಪ್ಪೂರಿನ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ನುಗ್ಗಿರುವ ಮುಸುಕುಧಾರಿಗಳು ಮೊದಲಿಗೆ ಹಣ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಆದ್ರೆ ಹಣ ದೋಚಲು ಸಾಧ್ಯವಾಗದ ಹಿನ್ನೆಲೆ ಮಷಿನ್ ನನ್ನೇ ಹೊತ್ತೊಯ್ದಿದ್ದಾರೆ. ಎಟಿಎಂಗೆ ಹಣ ತೆಗೆದಯಲು ಬಂದು ನೋಡಿದ ಸ್ಥಳೀಯರಿಗೆ ಎಟಿಎಂ ಕಳ್ಳತನವಾಗಿರುವುದು ತಿಳಿದಿದೆ. ಮಷಿನ್ ಇಲ್ಲದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ ವ್ಯಕ್ತಿ ಸಾವು

ರಮೇಶ್ ಜಾರಕಿಹೊಳಿ ದೈವಭಕ್ತ, ಸಮಾಜಕ್ಕೆ ಅಂಜುವ ವ್ಯಕ್ತಿ : ಯೋಗೇಶ್ವರ್

ಎಂಜಿನಿಯರಿಂಗ್ ಫ್ರೆಶರ್ ಗಳಿಗೆ ಗುಡ್ ನ್ಯೂಸ್ : ಪೇಪಾಲ್ ಸೇರಲು ಸುವರ್ಣಾವಕಾಶ

ಆಸ್ತಿ ವಿವಾದ : ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ‘ಜೈಷ್‌ ಉಲ್‌ ಹಿಂದ್‌’ ಸಂಘಟನೆ ಕೈವಾಡದ ಸುದ್ದಿ ಸುಳ್ಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd