ಪತಿಯ ಕಿರುಕುಳಕ್ಕೆ ನೊಂದು ತಾಯಿ-ಮಗ ಆತ್ಮಹತ್ಯೆ Saaksha Tv
ಬೆಳಗಾವಿ: ಪತಿಯ ಕಿರುಳ ತಾಳಲಾರದೆ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ Belagavi ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ನಡೆದಿದೆ.
ಮೃತದುರ್ದೈವಿಗಳು 32 ವರ್ಷದ ಸೇವಂತಿ ಪ್ಯಾಟಿ ಮತ್ತು 12 ವರ್ಷದ ಮಹಾಂತೇಶ್ ಪ್ಯಾಟಿ ಎಂದು ತಿಳಿದು ಬಂದಿದೆ. ಸೇವಂತಿ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಈ ಗಂಡು ಮಕ್ಕಳು ಬುದ್ದಿಮಾಂದ್ಯರಾಗಿದ್ದರು. ಮಕ್ಕಳು ಬಿದ್ದಿಮಾಂದ್ಯರಾಗಿರುವುದಕ್ಕೆ ಗಂಡನು ಪ್ರತಿದಿವಸ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಸೇವಂತಿ ತನ್ನ ಒಬ್ಬ ಮಗನನ್ನು ತನ್ನ ತಂಗಿಯ ಮನೆಯಲ್ಲಿ ಬಿಟ್ಟಿದ್ದಳು. ಇನ್ನೊಂದು ಮಗುವನ್ನು ಸೇವಂತಿ ತನ್ನ ಬಳಿ ಇಟ್ಟುಕೊಂಡಿದ್ದಳು. ಪತಿಯು ಬುದ್ದಿಮಾಂದ್ಯ ಮಕ್ಕಳು ಜನಿಸಿರುವುದರಿಂದ ಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದು, ಇದನ್ನು ಸಹಿಸಿಕೊಂಡು ಇದ್ದಳು. ನಿನ್ನೆ ಸಂಜೆ ಮನೆಗೆ ಬಂದ ಪತಿ, ಹೆಂಡತಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದನು. ಹೆಂಡತಿಗೆ ಆಗಾಗ ಮನೆ ಬಿಟ್ಟು ಹೋಗಿ, ನಿನ್ನ ಬಿಟ್ಟು ಬೇರೊಂದು ಮದುವೆ ಆಗುವೆ ಎಂದು ಬೆದರಿಕೆ ಹಾಕುತ್ತಿದ್ದನು ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಸೇವಂತಿ ತಾನು ಮತ್ತು ಮಗನೊಂದಿಗೆ ಇಂದು ಬೆಳಗ್ಗೆ ಗ್ರಾಮದ ಹೊರ ವಲಯದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅಗ್ನಶಾಮಕ ಸಿಬ್ಬಂದಿ, ಪೊಲೀಸರು Police ಸ್ಥಳಕ್ಕೆ ಆಗಮಿಸಿದ್ದು ಸಿಬ್ಬಂದಿ ಕೆರೆಯಿಂದ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.