ಕಾಶ್ಮೀರದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಮೌನಿರಾಯ್
ಕೆಲ ದಿನಗಳ ಹಿಂದೆಯಷ್ಟೆ ಉದ್ಯಮಿ ಸೂರಜ್ ನಂಬಿಯಾರ್ ಕೈ ಹಿಡಿದಿರುವ ಬಾಲಿವುಡ್ ನಟಿ ಮೌನಿರಾಯ್ ಪತಿಯೊಂದಿಗೆ ಮಧು ಚಂದ್ರವನ್ನ ಎಂಜಾಯ್ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಪತಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನ ನಟಿ ಮೌನಿರಾಯ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಹೊಟೆಲ್ ಒಂದರ ಹೊರಬಾಗದಲ್ಲಿ ಮೌನಿರಾಯ್ ಹೈ ನೆಕ್ ಸ್ವೆಟರ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದರೆ ಪತಿ ಸೂರಜ್ ವರ್ಣರಂಜಿತ ಸ್ವೆಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೌನಿ ಹಂಚಿಕೊಂಡಿರುವ ಪೋಟೋಗಳಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರೀತಿಯಿಂದ ಲೈಕ್ ಮಾಡಿ ಹಾರೈಸುತ್ತಿದ್ದಾರೆ. “ನೀವಿಬ್ಬರು ಮೇಡ್ ಫಾರ್ ಈಚ್ ಅದರ್” ಹೀಗೆ ಒಟ್ಟಿಗೆ ಇರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಜನವರಿ 27 ರಂದು ಮೌನಿ ರಾಯ್ ಮತ್ತು ಸೂರಜ್ ಗೋವಾದಲ್ಲಿ ವಿವಾಹವಾಗಿದ್ದರು. ಮೊದಲು ಮಲಯಾಳಿ ಮತ್ತು ಬೆಂಗಾಳಿ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು ಪತಿ ಸೂರಜ್ ದುಬೈ ಮೂಲದ ಉದ್ಯಮಿಯಾಗಿದ್ದು ಬಹಳ ದಿನಗಳಿಂದ ಡೆಟಿಂಗ್ ನಡೆಸುತ್ತಿದ್ದರು.