Bollywood : ಮೌನಿ ಮದುವೆ : ವರನ ಜೊತೆಗೆ ಕುಣಿದು ಕುಪ್ಪಳಿಸಿದ ‘ನಾಗಿನ್’
ಬಾಲಿವುಡ್ ನಟಿ ಮೌನಿ ರಾಯ್ , ಕೆಜಿಎಫ್ ನ ಐಟಂ ಹಾಡಿಗೆ ಹಿಂದಿ ವರ್ಷನ್ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಮೌನಿ ಈಗ ಸದ್ಯ ಮದುವೆಯ ಖುಷಿಯಲ್ಲಿದ್ದಾರೆ.. ಅದ್ಧೂರಿ ಮೆಹಂದಿ ಅರಿಶಿಣ ಶಾಸ್ತ್ರದಲ್ಲಿ ತಮ್ಮ ಭಾವಿ ಪತಿಯ ಜೊತೆಗೆ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟವರು ಮೌನಿ ರಾಯ್.. ಮೌನಿ ರಾಯ ಅತಿ ಹೆಚ್ಚು ಫೇಮ್ ತಂದುಕೊಟ್ಟಿದ್ದು , ಪೌರಾಣಿಕ ಕಥೆಯಾಧಾರಿತ ಮಹಾದೇಹ ಧಾರಾವಾಹಿಯಲ್ಲಿನ ಸತಿ ಪಾತ್ರ ಮತ್ತೊಂದು ನಾಗಿನ್ ನಲ್ಲಿ ಇಚ್ಛೀದಾರಿ ನಾಗಿಣಿ ಪಾತ್ರ. ದೆರೆಡು ಪಾತ್ರ ಮೌನಿ ಅವರನ್ನ ಫೇಮಸ್ ಮಾಡಿದ್ದವು..
ಮೌನಿ ದುಬೈ ಮೂಲದ ಉದ್ಯಮಿ ಸೂರಜ್ ನಂಬೂರಿ ಜೊತೆಗೆ ವಿವಾಹವಾಗ್ತಿದ್ಧಾರೆ… ಇದೇ ಖುಷಿಯಲ್ಲಿ ಕುಟುಂಬಸ್ಥರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.. ನಿನ್ನೆಯಿಂದ ಅನೇಕ ಶಾಸ್ತ್ರಗಳು ಅದ್ಧೂರಿಯಾಗಿ ನೆರವೇರುತ್ತಿದ್ದು , ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧಿತ ಫೋಟೋ ವಿಡಿಯೋಗಳು ವೈರಲ್ ಆಗ್ತಿವೆ..
ಇನ್ನೂ ಮಲಯಾಳಿ ಹಾಗೂ ಬೆಂಗಾಲಿ ಸಂಪ್ರದಾಯದಂತೆ ವಿವಾಹವಾಗುತ್ತಿದ್ದಾರೆ ಮೌನಿ.. ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
mouni roy – wedding photos videos – updates