B. Y. Raghavendra | ಸಿದ್ದರಾಮಯ್ಯ ಹೇಳಿಕೆಗಳೇ ಗಲಭೆಗೆ ಕುಮ್ಮಕ್ಕು
ಶಿವಮೊಗ್ಗ : ಸಿದ್ದರಾಮಯ್ಯ ಹೇಳಿಕೆಗಳಿಂದ ಇಂತಹ ಗಲಭೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ರಾಜಕಾರಣ ಬಿಟ್ಟು ನಾಡಿನಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ದು ಯಾಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ, ಅವರ ಮನಸ್ಥಿತಿ ಬಗ್ಗೆ ನಾನು ಮಾತನಾಡುವುದಿಲ್ಲ.
ಸಿದ್ದರಾಮಯ್ಯ ಹೇಳಿಕೆ ಇಂತಹ ಗಲಭೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ರಾಜಕಾರಣ ಬಿಟ್ಟು ನಾಡಿನಲ್ಲಿ ಶಾಂತಿ ನೆಲೆಸಲು ಮುಂದಾಗಬೇಕು.
ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಮತೀಯ ಶಕ್ತಿಗಳನ್ನ ಬ್ಯಾನ್ ಮಾಡಿದರೆ ಬೇರೆ ಸಂಘಟನೆಗಳಿಂದ ಬರುತ್ತವೆ. ಹಾಗಾಗಿ ಇಂತಹ ಶಕ್ತಿಗಳ ಮೂಲ ಹುಡುಕಿ ಅದನ್ನು ನಾಶಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಶಿವಮೊಗ್ಗದಲ್ಲಿ 5 ಲಕ್ಷ ಮನೆಗಳ ಮೇಲೆ ಧ್ವಜ ಹಾರಿಸಲಾಗಿದೆ. ಸಂಭ್ರಮಾಚರಣೆ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ. ಇಂತಹ ಮಾನಸಿಕತೆ ಬದಲಾಗಬೇಕು.
ಹಿಂದಿನ ಸರಕಾರಗಳ ಅವಧಿಯಲ್ಲಿ ತಿಂಗಳು ಕಳೆದರೂ ಕ್ರಮ ಆಗುತ್ತಿರಲಿಲ್ಲ. ಪ್ರೇಮ ಸಿಂಗ್ ಪ್ರಕರಣದಲ್ಲಿ ಒಂದೇ ದಿನದಲ್ಲಿ ನಾಲ್ಕು ಆರೋಪಿಗಳ ಬಂಧನವಾಗಿದೆ.
ನೆಟ್ಟಾರು ಹತ್ಯೆ, ಹಿಂದೆ ಹರ್ಷ ಹತ್ಯೆ ಪ್ರಕರಣಗಳಲ್ಲೂ ತಕ್ಷಣ ಆರೋಪಿಗಳ ಬಂಧನವಾಗಿದೆ. ಈಗ ಎನ್ ಐ ಎ ತನಿಖೆ ನಡೆಯುತ್ತಿದೆ, ಹಿಂದೂ ಕಾರ್ಯಕರ್ತರು ದಯಮಾಡಿ ಗಮನಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.








