ಮೈಸೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಜನಪ್ರತಿನಿಧಿಗಳಿಗೂ ಕೊರೊನಾ ಕಂಟವಾಗಿ ಕಾಡುತ್ತಿದೆ. ಇಂದು ಮಾಜಿ ಸಚಿವ ಜಮೀರ್ ಅಹಮದ್ ಗೆ ಕೊರೊನಾ ಇರುವುದು ದೃಢವಾದ ಬೆನ್ನಲ್ಲೇ ಇದೀಗ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೂ ಕೋವಿಡ್ ಸೋಂಕು ತಗುಲಿರುವುದು ಕನ್ ಫರ್ಮ್ ಆಗಿದೆ. ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ಸಂಸದರು ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕ ಸೋಂಕು ಇರುವುದು ದೃಢಪಟ್ಟಿದೆ.
ಇನ್ನೂ ಸಂಸದರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯ 17ಕ್ಕೂ ಹೆಚ್ಚು ಸದಸ್ಯರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸಂಸದರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಇತ್ತೀಚೆಗಷ್ಟೇ ಶ್ರೀನಿವಾಸ್ ಅವರು ವಿಜಯೇಂದ್ರ, ಶಾಸಕ ಪ್ರೀತಂಗೌಡ, MLC ವಿಶ್ವನಾಥ್, ಮಾಜಿ ಸಚಿವ ವಿಜಯಶಂಕರ್ ಹಾಗೂ ಇತರರನ್ನೂ ಭೇಟಿ ಮಾಡಿದ್ದರು. ಇದೀಗ ಎಲ್ಲರಿಗೂ ಕೊರೊನಾ ಆತಂಕ ಶುರುವಾಗಿದೆ.









