ಕೊಪ್ಪಳ ನಗರದಲ್ಲಿನ ಗವಿಮಠದ ಶ್ರೀಗಳು ಅನೇಕ ಸಾಮಾಜಿಕ ಕ್ರಾಂತಿ ಮಾಡುತ್ತಿದ್ದು, ಸದ್ಯ ದಿವ್ಯಾಂಗ ಚೇತನರಿಗೆ ಕಂಕಣ ಭಾಗ್ಯ ಕರುಣಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.
ಗವಿಮಠದ ಜಾತ್ರೆಯ ಹಿನ್ನೆಲೆಯಲ್ಲಿ ಜ.21 ದಿವ್ಯಾಂಗ ಚೇತನರಿಗೆ ಮದುವೆ ಮಾಡಿಸಲಾಯಿತು. ದಿವ್ಯಾಂಗ ಚೇತನರ ಸಾಮೂಹಿಕ ವಿವಾಹ ಮಠದ ಆವರಣದಲ್ಲಿ ನಡೆದಿದ್ದು, 21 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ದಂಪತಿಗಳಿಗೆ ಆಶೀರ್ವದಿಸಿದರು.
ಗವಿಮಠವು ಕನಿಷ್ಠ 800 ವರ್ಷಗಳಷ್ಟು ಹಳೆಯದಾಗಿದೆ. ಗವಿಮಠ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು, ಅನ್ನದಾನ, ಆಧ್ಯಾತ್ಮಿಕ ಜ್ಞಾನವನ್ನು ನೀಡುತ್ತದೆ.








