ಧೋನಿ ಯುಗಾಂತ್ಯ… ಸರ್ ಜಡೇಜಾ CSK ನಾಯಕ..!!!
ಬೆಂಗಳೂರು : ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೂ ಮುನ್ನ ಚೆನ್ನೈ ಕ್ಯಾಂಪ್ ನಿಂದ ಬಹುದೊಡ್ಡ ಸುದ್ದಿಯೊಂದು ಸ್ಫೋಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಎಂ.ಎಸ್.ಧೋನಿ ಕೆಳಗಿಳಿದಿದ್ದು, ಆಲ್ ರೌಂಡರ್ ರವೀಂದ್ರ ಜಡೇಜಾ ತಂಡದ ನೂತನ ನಾಯಕರಾಗಿದ್ದಾರೆ.
ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಖಾತ್ರಿ ಪಡೆಸಿದೆ. ಇದರೊಂದಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿ ಮೂಲಕ ದಿಗ್ಗಜ ಎಂಎಸ್ ಧೋನಿ ಅವರ ಐಪಿಎಲ್ ವೃತ್ತಿಬದುಕು ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ.
40 ವರ್ಷದ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇನ್ನು 15ನೇ ಆವೃತ್ತಿಯ ಐಪಿಎಲ್ ಧೋನಿಯ ಕಡೆಯ ಐಪಿಎಲ್ ಎಂದು ಹೇಳಲಾಗಿತ್ತು.
ಜೊತೆಗೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ ಯಾರು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಇದೀಗ ಈ ಪ್ರಶ್ನೆಗೆ ಜಡ್ಡು ಮೂಲಕ ಉತ್ತರ ಸಿಕ್ಕಿದೆ.
ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಎಂಎಸ್ ಧೋನಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಜಡ್ಡುಗೆ ನಾಯಕತ್ವದ ಪಾಠ ಹೇಳಿಕೊಡಲಿದ್ದಾರೆ. MS Dhoni hands over captaincy of CSK to Ravindra Jadeja